ಕೊಪ್ಪಳ| 20 ಜೋಡಿಗಳ ಸಾಮೂಹಿಕ ವಿವಾಹ
ಕೊಪ್ಪಳ: ಸಾಮೂಹಿಕ ವಿವಾಹಗಳು ಏರ್ಪಡಿಸುವುದರಿಂದ ಬಡವರಿಗೆ, ಆರ್ಥಿಕವಾಗಿ ಸದೃಢವಿಲ್ಲದವರಿಗೆ ಅನುಕೂಲವಾಗುತ್ತದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹೇಳಿದರು.
ಹಝರತ್ ಮೆಹಬೂಬ್ ಸುಬ್ಹಾನಿರವರ ಪವಿತ್ರ ಗ್ಯಾರವಿ ಶರೀಫ್ ಆಚರಣೆಯ ನಿಮಿತ್ತ ಸರ್ದಾರ್ ಗಲ್ಲಿಯ ಮುಸ್ಲಿಂ ಪಿಂಜಾರ್ ಪಂಚ ಕಮಿಟಿಯವರು ಆಯೋಜಿಸಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಸತತವಾಗಿ 21 ವರ್ಷದಿಂದ ಪ್ರತಿ ವರ್ಷ ಬಡ ಮುಸ್ಲಿಂ ಜೋಡಿಗಳ ಉಚಿತ ವಿವಾಹಗಳನ್ನು ನಡೆಸಿಕೊಂಡು ಬಂದಿರುವುದು ಸಂತೋಷದ ವಿಚಾರ. ಈ ವರ್ಷ ಸುಮಾರು 20 ಬಡ ಜೋಡಿಗಳು ಹೆಸರುಗಳನ್ನು ನೋಂದಾಯಿಸಿದ್ದು, ನೂತನ ವಧು ವರರಿಗೆ ಶುಭ ಕೋರುತ್ತೇನೆ ಎಂದು ಹೇಳಿದರು.
ಜೆಡಿಎಸ್ ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಮಾತನಾಡಿ, ಸಮಾಜದಲ್ಲಿರುವ ಬಡ ಮುಸ್ಲಿಂ ಜೋಡಿಗಳಿಗೆ ಸಾಮೂಹಿಕ ವಿವಾಹಗಳನ್ನು ಮಾಡುವುದರ ಮೂಲಕ ಅವರ ದೊಡ್ಡ ಭಾರವನ್ನು ಕಡಿಮೆ ಮಾಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಈ ಪವಿತ್ರ ಗ್ಯಾರವಿ ನಿಮಿತ್ತ ಬೃಹತ್ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಪ್ರಮಾಣ ಪತ್ರವನ್ನು ವಿತರಿಸಿದರು. ಪ್ರಾಸ್ತಾವಿಕವಾಗಿ ಖಾಸಿಂ ಸರ್ದಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ್ ಗುಪ್ತ, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಸುರೇಶ್ ಭೂಮರೆಡ್ಡಿ, ಕೆಪಿಸಿಸಿ ಸಂಯೋಜಕ ಡಾ.ಕೆ.ಎಂ. ಸೈಯದ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕಾಟನ್ ಪಾಷಾ, ಸಮಾಜದ ಗುರುಗಳು, ನದಾಫ್ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಫ್. ಮುದ್ದಾಬಳ್ಳಿ, ಕೊಪ್ಪಳ ತಾಲೂಕು ನದಾಫ್ ಸಂಘದ ಅಧ್ಯಕ್ಷರಾದ ಅಸ್ಮನ್ ಸಾಬ್, ಉಪಾಧ್ಯಕ್ಷರಾದ ಫಕ್ರುಸಾಬ್, ಮಹಿಳಾ ಜಿಲ್ಲಾ ಅಧ್ಯಕ್ಷರಾದ ಸಲೀಂ ಜಾನ್, ಮುಸ್ಲಿಂ ಪಿಂಜಾರ್ ಪಂಚ ಕಮಿಟಿಯ ಗೌರವ ಅಧ್ಯಕ್ಷರು ಹಾಗೂ ನದಾಫ್ ಪಿಂಜಾರ್ ಸಂಘದ ರಾಜ್ಯ ಕೋಶಾಧಿಕಾರಿ ಶಹಾಬುದ್ದೀನ್ ಸಾಬ್ ನೂರಬಾಷ್, ಪಂಚ ಕಮಿಟಿಯ ಅಧ್ಯಕ್ಷರಾದ ಖಾದರ್ ಸಾಬ್ ಕುದುರಿಮೋತಿ, ನಗರಸಭೆ ಮಾಜಿ ಸದಸ್ಯ, ಪಂಚ ಕಮಿಟಿಯ ಕಾರ್ಯದರ್ಶಿ ಮೆಹಬೂಬ್ ಬಾಷಾ ಮಾನ್ವಿ, ಖಜಾಂಚಿಯಾದ ಮೀರಾಸಾಬ್, ಝಂಡಾ ಕಟ್ಟಿ ಅಧ್ಯಕ್ಷ ಮರ್ದಾನ್ ಸಾಬ್ ಲುಂಗಿ, ಪಂಚ ಕಮಿಟಿಯ ಇತರ ಸದಸ್ಯರಾದ ರಿಯಾಝ್ ಕುದ್ರಿಮೋತಿ, ರಶೀದ್ ನೀರಲಗಿ, ಅಬ್ದುಲ್ ರೆಹಮಾನ್, ವಾಸಿಮ್, ಇಸ್ಮಾಯಿಲ್ ಸಾಬ್, ನಬಿಸಾಬ್ , ಕುತ್ತುಬುದ್ದೀನ್, ಖಾಜಾಸಾಬ್ ನಗರ ಘಟಕ ಕಾರ್ಯದರ್ಶಿ ಬಾಬುಸಾಬ, ಅಮೀರ್ ಹಮ್ಜಾ ನಿವೃತ್ತ ಶಿಕ್ಷಕರು, ರಮಜಾನ್ ಸಾಬ್ ಸೇರಿದಂತೆ ಸರ್ವ ಸದಸ್ಯರು ಪಾಲ್ಗೊಂಡಿದ್ದರು.