×
Ad

ಅಂಜನಾದ್ರಿ: ಹನುಮ ಮಾಲಾ ವಿಸರ್ಜನೆ ಕಾರ್ಯಕ್ರಮದಲ್ಲಿ ಉಗ್ರ ಲಾರೆನ್ಸ್ ಬಿಷ್ಣೊಯ್ ಫೋಟೋ ಹಿಡಿದು ಬೆಟ್ಟ ಹತ್ತಿದ ಯುವಕ!

ಮಾಹಿತಿ ಕಲೆಹಾಕುತ್ತಿರುವ ಪೊಲೀಸರು

Update: 2025-12-03 23:54 IST

ಗಂಗಾವತಿ: ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಬುಧವಾರ ಹನುಮ ಮಾಲಾ ವಿಸರ್ಜನೆ ಕಾರ್ಯಕ್ರಮವು ಅತ್ಯಂತ ಶ್ರದ್ಧೆ ಭಕ್ತಿಯಿಂದ ಜರಗಿತು. ಇಂತಹ ಕಾರ್ಯಕ್ರಮದಲ್ಲಿ ಹನುಮಮಾಲಾಧಾರಿಯೊಬ್ಬ ಉಗ್ರ ಲಾರೆನ್ಸ್ ಬಿಷ್ಟೋಯ್ ನ ಫೋಟೋ ಹಿಡಿದು "ಲಾರೆನ್ಸ್ ಗೆ ಜಯವಾಗಲಿ", "ಭಜರಂಗಬಲಿ ಅವರಿಗೆ ಇನ್ನಷ್ಟು ಶಕ್ತಿ ನೀಡಲಿ", "ನಾನು ಬಿಷ್ಟೋಯ್ ಅಭಿಮಾನಿ" ಎಂದು ಘೋಷಣೆ ಕೂಗುತ್ತಾ ಬೆಟ್ಟ ಹತ್ತುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಲಾರೆನ್ಸ್ ಬಿಷ್ಟೋಯ್ ನ ಫೋಟೋ ಹಿಡಿದ ಮಾಲಧಾರಿ ಬೆಳಗಾವಿಯ ರಾಜು ಕೋಳಿವಾಡ ಎಂದು ತಿಳಿದು ಬಂದಿದೆ.

ಫೋಟೋ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮಾಹಿತಿ ಕಲೆಹಾಕುತ್ತಿರುವ ಪೊಲೀಸರು:

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಿಷ್ಟೋಯ್ ಅಭಿಮಾನಿ ರಾಜು ಕೋಳಿವಾಡ ಕುರಿತು ಅಂಜನಾದ್ರಿಯಲ್ಲಿರುವ ಸಿಸಿ ಕ್ಯಾಮರಾ ವಿಡಿಯೋಗಳನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News