ಕನಕಗಿರಿ: ಟ್ರ್ಯಾಕ್ಟರ್ ಪಲ್ಟಿ ಚಾಲಕ ಪಾರು
Update: 2025-12-03 22:31 IST
ಕನಕಗಿರಿ: ಭತ್ತದ ಹುಲ್ಲು ತುಂಬಿಕೊಂಡು ತಾಲೂಕಿನ ನೀರ್ಲೂಟಿ ಗ್ರಾಮದ ಕಡೆಗೆ ಬರುತ್ತಿದ್ದ ಟ್ರ್ಯಾಕ್ಟರ್ ರಸ್ತೆಯಲ್ಲಿ ಬಿದ್ದ ಘಟನೆ ಬುಧವಾರ ನಡೆದಿದೆ.
ಕಾರಟಗಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದಿಂದ ಭತ್ತದ ಹುಲ್ಲು ತರುತ್ತಿರುವಾಗ ಈ ಘಟನೆ ನಡೆದಿದೆ.
ರೈತರೊಬ್ಬರು ರಸ್ತೆಯಲ್ಲಿ ಮೆಕ್ಕೆಜೋಳದ ರಾಶಿ ಹಾಕಿ ಶುಚಿತ್ವ ಮಾಡುತ್ತಿದ್ದು ಟ್ರ್ಯಾಕ್ಟರ್ ಮೆಕ್ಕೆಜೋಳದ ಕಡೆಗೆ ವಾಲಿದೆ.
ಅದೃಷ್ಟವಶಾತ್ ಚಾಲಕ ಹಾಗೂ ಹುಲ್ಲಿನ ಮೇಲೆ ಕುಳಿತುಕೊಂಡಿದ್ದ ರೈತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.