Kanakagiri | ಟಿಪ್ಪರ್- ಬೈಕ್ ನಡುವೆ ಢಿಕ್ಕಿ; ಬೈಕ್ ಸವಾರ ಮೃತ್ಯು
Update: 2026-01-11 12:46 IST
ಸಾಂದರ್ಭಿಕ ಚಿತ್ರ
ಕನಕಗಿರಿ : ತಾಲೂಕಿನ ನವಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬೈರಾಪುರ ಗ್ರಾಮದಲ್ಲಿ ಮರಳಿನ ಟಿಪ್ಪರ್, ಬೈಕ್‌ಗೆ ಢಿಕ್ಕಿಯಾಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ರವಿವಾರ ನಡೆದಿದೆ.
ರುದ್ರಗೌಡ ದಳಪತಿ (63) ಮೃತರು ಎಂದು ತಿಳಿದು ಬಂದಿದೆ.
ಚಿರ್ಚನ ಗುಡ್ಡ ಗ್ರಾಮದಿಂದ ಚಿಕಿತ್ಸೆ ಪಡೆಕೊಂಡು ನವಲಿಗೆ ಮರಳಿ ಬರುವಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.