×
Ad

ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಪೊಕ್ಸೊ ಕಾನೂನು ಕುರಿತು ಜಾಗೃತಿ ಕಾರ್ಯಕ್ರಮ

Update: 2026-01-10 23:05 IST

ಕೊಪ್ಪಳ: ಮೌಲಾನಾ ಆಜಾದ್ ಮಾದರಿ ಶಾಲೆ, ದಿಡ್ಡಿಕೇರಾದಲ್ಲಿ ಶನಿವಾರ ಪೊಕ್ಸೊ(ಮಕ್ಕಳ ಲೈಂಗಿಕ ಅಪರಾಧಗಳ ತಡೆ) ಕಾನೂನು ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕೊಪ್ಪಳದ ಯುವ ವಕೀಲೆಯಾದ ಶಗುಫ್ತಾ ತಬ್ಸುಮ್ ಅವರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಅಸುರಕ್ಷಿತ ಪರಿಸ್ಥಿತಿಗಳನ್ನು ಹೇಗೆ ಗುರುತಿಸಬೇಕು, ಅಂತರ್ಜಾಲದ ಮೂಲಕ ಉಂಟಾಗುವ ಅಪಾಯಗಳಿಂದ ಹೇಗೆ ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ವಿವರಿಸಲಾಯಿತು. ತಪ್ಪು ಮಾಡಿದವರು ಆರೋಪಿಗಳೇ ಹೊರತು ಶೋಷಣೆಗೆ ಒಳಗಾದ ಮಕ್ಕಳು ಯಾವುದೇ ಕಾರಣಕ್ಕೂ ತಪ್ಪಿತಸ್ಥರಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದರು.

ಅಸುರಕ್ಷಿತ ಅಥವಾ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಅದನ್ನು ಹೇಗೆ ಎದುರಿಸಬೇಕು? ಪಾಲಕರು, ಶಿಕ್ಷಕರು  ಕಾನೂನು ನೆರವನ್ನು ಹೇಗೆ ಪಡೆಯಬೇಕು ಎಂಬುದನ್ನು ಆಟಗಳು ಮತ್ತು ಚಟುವಟಿಕೆಗಳ ಮೂಲಕ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥರಾದ ಪ್ರಕಾಶ್, ಶಿಕ್ಷಕಿ ತರ್ನುಮ್, ಕೊಪ್ಪಳ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಅತಿಥಿ ಸಹಾಯಕ ಪ್ರಾಧ್ಯಾಪಕರಾದ ಮೌಲಾಸಾಬ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News