×
Ad

ಕನಕಗಿರಿ | ಫಾತಿಮಾ ಶೇಖ್ ಸಾಧನೆ ಸಮಾಜಕ್ಕೆ ಮಾದರಿ

Update: 2026-01-09 11:31 IST

ಕನಕಗಿರಿ: ಮಹಿಳೆಯರಿಗೆ ಶಿಕ್ಷಣ ದೂರವಾಗಿದ್ದ ಕಾಲದಲ್ಲಿ ಅಕ್ಷರ ಕಲಿತು, ಭಾರತದ ಮೊದಲ ಮುಸ್ಲಿಂ ಶಿಕ್ಷಕಿಯಾಗಿ ಹೊರಹೊಮ್ಮಿದ ಫಾತಿಮಾ ಶೇಖ್ ಅವರ ಸಾಧನೆ ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದು ಪ್ರಗತಿಪರ ಮುಖಂಡ ಪಾಮಣ್ಣ ಅರಳಿಗನೂರು ಹಾಗೂ ಯುವ ಮುಖಂಡ ಅನ್ನು ಚಳ್ಳಮರದ್ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಫಾತಿಮಾ ಶೇಖ್ ಅವರ ಜನ್ಮದಿನಾಚರಣೆಯ ಅಂಗವಾಗಿ, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಫಾತಿಮಾ ಶೇಖ್ ಅವರು ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಮಾತ್ರವಲ್ಲದೆ, ಮಹಾನ್ ಸಮಾಜ ಸುಧಾರಕಿಯೂ ಆಗಿದ್ದರು. ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಹೆಗಲಿಗೆ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದರು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಚಲುವಾದಿ, ಪಟ್ಟಣ ಪಂಚಾಯಿತಿ ಹಂಗಾಮಿ ಅಧ್ಯಕ್ಷ ಕಂಠಿರಂಗ ನಾಯಕ, ಪ್ರಮುಖರಾದ ನೀಲಕಂಠ ಬಡಿಗೇರ್, ಮಕ್ತುಮ್ ಸಾಬ್, ಶಶಿ ಕೋರಿ, ಮಂಜುನಾಥ, ಉಮೇಶ ಮ್ಯಾಗಡೆ, ಕಲ್ಯಾಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News