ಕನಕಗಿರಿ | ಅಕ್ರಮ ಮರಳು ಗಣಿಗಾರಿಕೆ: ಎಂಟು ಹಿಟ್ಯಾಚಿ ವಶ, ಪ್ರಕರಣ ದಾಖಲು
ಕನಕಗಿರಿ : ತಾಲೂಕಿನ ನವಲಿ ಗ್ರಾಮದಲ್ಲಿ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದ ಆರೋಪದಡಿ ಎಂಟು ಹಿಟ್ಯಾಚಿಗಳ ವಿರುದ್ಧ ಮಂಗಳವಾರ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನವಲಿ ಸರಕಾರಿ ಹಳ್ಳದ ಅಕ್ರಮ ಮರಳು ಸರ್ವೇ ನಂಬರ್ 219/2 &215// ಬಸವನ ಗೌಡ ಮನ್ನಾಪುರ, 235//8 ವಿರುಪಣ್ಣ ಕಲ್ಲೂರು ನವಲಿ, 235/ / ಪಿರಸಾಬ, 235/ * / 8 ಹನುಮಂತ ಕಲ್ಲೂರು, 236/1/*ಜಡಿಯಪ್ಪ ಭೋವಿ, 236/1/ ವಿರೇಶ, 237/2/ ರಾಮ್ಮಣ್ಣ ಗಾಳಿ, 237/7/* ರಾಮಣ್ಣ ದನಕಾಯರ ನವಲಿ ಹಳ್ಳದಲ್ಲಿ ಹಾಗೂ ಮರಳಿನ ಪಾಯಿಂಟ್ nಲ್ಲಿ ಯಾವುದೇ ದಾಖಲಾತಿ ಇಲ್ಲದೇ ಅಕ್ರಮವಾಗಿ ಕಳ್ಳತನದಿಂದ ಹಿಟ್ಯಾಚಿಯಿಂದ ಟ್ರಾಕ್ಟರಿ, ಟ್ರಾಲಿಯಲ್ಲಿ ಮರಳು ತುಂಬಿತ್ತಿರುವ ಮಾಹಿತಿ ಬಂದ ಮೇರೆಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಜಮೀನುಗಳಲ್ಲಿ ಹಿಟ್ಯಾಚಿ ಮುಖಾಂತರ ಮರಳನ್ನು ಸಂಗ್ರಹಣೆ ಮಾಡುತ್ತಾ ಟ್ರಾಕ್ಟರಿ, ಟ್ರಾಲಿಯಲ್ಲಿ ತುಂಬುತ್ತಿರುವದನ್ನು ನೋಡಿ ನಾವು ಅವರನ್ನು ಹಿಡಿದುಕೊಳ್ಳುವಷ್ಟರಲ್ಲಿ ಸ್ಥಳದಲ್ಲಿ ಹಿಟ್ಯಾಚಿಯನ್ನು ಬಿಟ್ಟು ಟ್ರಾಕ್ಟರಿ, ಟ್ರಾಲಿಯ ಸಮೇತ ಪರಾರಿಯಾಗಿದ್ದಾರೆಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವಲಿ ಗ್ರಾಮದ ಸರ್ಕಾರಿ ಹಳ್ಳದ ವ್ಯಾಪ್ತಿಯಲ್ಲಿರುವ ಸರ್ವೇ ನಂಬರ್ 219/2, 215/, 235/8, 236/1, 237/2 ಹಾಗೂ 237/7 ಪ್ರದೇಶಗಳಲ್ಲಿ ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಮರಳು ಕಳ್ಳತನ ನಡೆಸಲಾಗುತ್ತಿತ್ತು ಎಂಬ ಮಾಹಿತಿ ಪೊಲೀಸ್ ಇಲಾಖೆಗೆ ಲಭ್ಯವಾಗಿದೆ.
ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದವರು ಬಸವನಗೌಡ ಮನ್ನಾಪುರ, ವಿರುಪಣ್ಣ ಕಲ್ಲೂರು, ಪಿರಸಾಬ, ಹನುಮಂತ ಕಲ್ಲೂರು, ಜಡಿಯಪ್ಪ ಭೋವಿ, ವಿರೇಶ, ರಾಮಣ್ಣ ಗಾಳಿ ಹಾಗೂ ರಾಮಣ್ಣ ದನಕಾಯರ ಸೇರಿದಂತೆ ಒಟ್ಟು ಎಂಟು ಜನರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಪೊಲೀಸರು ದಾಳಿ ನಡೆಸಿದಾಗ, ಹಳ್ಳದ ಪ್ರದೇಶ ಹಾಗೂ ಮರಳು ಸಂಗ್ರಹಣಾ ಪಾಯಿಂಟ್‌ಗಳಲ್ಲಿ ಹಿಟ್ಯಾಚಿ (ಜೆಸಿಬಿ) ಮೂಲಕ ಮರಳನ್ನು ತೆಗೆಯುತ್ತಾ, ಟ್ರಾಕ್ಟರ್–ಟ್ರಾಲಿಗಳಲ್ಲಿ ತುಂಬಲಾಗುತ್ತಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿದ ವೇಳೆ ಆರೋಪಿಗಳು ಹಿಟ್ಯಾಚಿಯನ್ನು ಅಲ್ಲಿಯೇ ಬಿಟ್ಟು, ಟ್ರಾಕ್ಟರ್ ಹಾಗೂ ಟ್ರಾಲಿಗಳ ಸಮೇತ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.