×
Ad

ಕನಕಗಿರಿ | ವಿಜ್ಞಾನ ವಸ್ತು ಪ್ರದರ್ಶನಗಳು ವಿಜ್ಞಾನದ ಆಳವಾದ ತಿಳಿವಳಿಕೆಯನ್ನು ಬೆಳೆಸುತ್ತದೆ : ಶಂಶಾದ್‌ ಬೇಗಂ

Update: 2025-12-30 18:14 IST

ಕನಕಗಿರಿ: 'ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪಯಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ವೈಜ್ಞಾನಿಕ ಪರಿಕಲ್ಪನೆಗಳ ಪ್ರಾಯೋಗಿಕ ಕಲಿಕೆ ಮತ್ತು ಪ್ರಾಯೋಗಿಕ ಅನ್ವಯಕ್ಕೆ ವೇದಿಕೆ ಒದಗಿಸುತ್ತದೆ' ಎಂದು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷೆ ಶಂಶಾದ್‌ ಬೇಗಂ ಹೇಳಿದರು.

ಪಟ್ಟಣದ ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಗಸ್ತ್ಯ ಫೌಂಡೇಶನ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

“ವಿದ್ಯಾರ್ಥಿಗಳನ್ನು ಉತ್ತೇಜಿಸುವುದು ವಿಜ್ಞಾನ ಪ್ರದರ್ಶನಗಳ ಪ್ರಾಥಮಿಕ ಉದ್ದೇಶ. ಇದು ಪಠ್ಯಪುಸ್ತಕಗಳನ್ನು ಮೀರಿ ವಿಜ್ಞಾನದ ಆಳವಾದ ತಿಳಿವಳಿಕೆಯನ್ನು ಬೆಳೆಸುತ್ತದೆ' ಎಂದರು.

ವಿಜ್ಞಾನ ವಸ್ತು ಪ್ರದರ್ಶನದಿಂದ ಗ್ರಾಮೀಣ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯುತ್ತದೇ ಎಂದು ಶಿಕ್ಷಣ ಸಂಯೋಜಕ ಶ್ರೀಕಾಂತ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ತುಳುಜಾ ನಾಯ್ಕ್ ವಹಿಸಿದರು. ಅಗಸ್ತ್ಯ ಫೌಂಡೇಶನ್ ತಾಲೂಕು ಸಂಚಾಲಕ ಹನುಮಂತಪ್ಪ, ಶಿಕ್ಷಕರಾದ ಬಸವರಾಜ ಹೈಲಿ, ಶರಣಯ್ಯ, ಶಿಕ್ಷಕಿ ದ್ಯಾಮಮ್ಮ, ಪಾರ್ವತಿ ಹಾಗೂ ಅಥಿತಿ ಶಿಕ್ಷಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News