×
Ad

ಕೊಪ್ಪಳ | ಜಾತಿನಿಂದನೆ ಮಾಡಿದ ರಮೇಶ ಕತ್ತಿ ವಿರುದ್ಧ ಕ್ರಮವಹಿಸಲು ದೂರು

Update: 2025-10-20 19:30 IST

ಕೊಪ್ಪಳ: ವಾಲ್ಮೀಕಿ ನಾಯಕ ಜನಾಂಗಕ್ಕೆ ನಿಂದನೆ ಮಾಡಿದ ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ನಗರದ ನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಸೋಮವಾರ ಸಿಪಿಐ ಜಯಪ್ರಕಾಶಗೆ ದೂರು ಸಲ್ಲಿಸಿದರು.

ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯುತ್ತಿರುವಾಗ ಪ್ರಚಾರದ ಭರಾಟೆಯಲ್ಲಿ ನಮ್ಮ ವಾಲ್ಮೀಕಿ ನಾಯಕ ಸಮಾಜವನ್ನು ಮಾಜಿ ಸಂಸದ ಮತ್ತು ಬೆಳಗಾವಿ ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ರಮೇಶ ಕತ್ತಿ ನಿಂದಿಸಿದ್ದಾರೆ. ಅಲ್ಲದೇ ಸಾಮಾನ್ಯ ಕ್ಷೇತ್ರಗಳಾದ ಚಿಕ್ಕೋಡಿ ಲೋಕಸಭೆ, ಗೋಕಾಕ್ ಮತ್ತು ಅರಭಾವಿ ವಿಧಾನಸಭಾ ಕ್ಷೇತ್ರಗಳಲ್ಲಿ ಬ್ಯಾಡ ಜನಾಂಗದವರೇ ಸರ್ಧಿಸಿ ಗೆದ್ದರೆ, ನಾವೇನು ಮೀನು ಹಿಡಿಯಲು ಹೋಗಬೇಕಾ? ಎನ್ನುವ ಮೂಲಕ ಭಾಷಣ ಮಾಡಿ, ವಾಲ್ಮೀಕಿ ಮತ್ತು ಮೀನುಗಾರರಿಗೆ ನಿಂದನೆ ಮಾಡಿ, ಜಾತಿ ವಿಷ ಬೀಜ ಬಿತ್ತಿದ್ದಾರೆ. ಸಂವಿಧಾನಕ್ಕೆ ಗೌರವ ಕೊಟ್ಟು, ಯಾವುದೇ ರೀತಿಯ ಗೊಂದಲ, ಕೋಮು ಸಂಘರ್ಷ, ಜಾತಿ ಸಂಘರ್ಷಕ್ಕೆ ಎಡೆ ಮಾಡದೇ ತಾಳ್ಮೆಯಿಂದ ನಮ್ಮ ಸಮಾಜದವರು ಇದ್ದರು.

ಆದರೆ ರಮೇಶ ಕತ್ತಿ ಅವಾಚ್ಯ ಪದ ಬಳಸಿ, ಸಮಾಜಕ್ಕೆ ನಿಂದನೆ ಮಾಡಿದ್ದಾರೆ. ಹಾಗಾಗಿ ನ್ಯಾಯ ದೊರಕಿಸಿಕೊಡಬೇಕು ಎಂದು ವಾಲ್ಮೀಕಿ ನಾಯಕ ಸಮಾಜದ ಮುಖಂಡರು ದೂರಿನ ಮೂಲಕ ಆಗ್ರಹಿಸಿದರು.

ವಾಲ್ಮೀಕಿ ನಾಯಕ ಸಮಾಜದ ಮುಖಂಡರಾದ ರಾಮಣ್ಣ ನಾಯಕ, ಟಿ.ರತ್ನಾಕರ, ಯಮನೂರಪ್ಪ ನಾಯಕ, ಚನ್ನಪ್ಪ ಹಂಚಿನಾಳ, ಮಂಜುನಾಥ ಗೊಂಡಬಾಳ, ರಾಮಣ್ಣ ಚೌಡ್ಕಿ, ಶಿವಮೂರ್ತಿ, ವೀರಭದ್ರಗೌಡ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News