×
Ad

ಕೊಪ್ಪಳ | ಭೂಗೋಳಶಾಸ್ತ್ರವೆಂಬುದು ಕೇವಲ ನಕ್ಷೆ, ಪ್ರದೇಶ ಅಧ್ಯಯನದ ವಿಷಯವಲ್ಲ: ಕುಲಪತಿ ಪ್ರೊ.ಬಿ.ಕೆ.ರವಿ

Update: 2025-10-15 19:01 IST

ಕೊಪ್ಪಳ : ಭೂಗೋಳಶಾಸ್ತ್ರವೆಂಬುದು ಕೇವಲ ನಕ್ಷೆ ಹಾಗೂ ಪ್ರದೇಶ ಅಧ್ಯಯನದ ವಿಷಯವಲ್ಲ, ಇದು ಮಾನವ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳುವ ಒಂದು ಸಜೀವ ಶಾಸ್ತ್ರವಾಗಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಹೇಳಿದರು.

ಯಲಬುರ್ಗಾ ಪಟ್ಟಣದ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಭೂಗೋಳಶಾಸ್ತ್ರ ಅಧ್ಯಯನ ವಿಭಾಗದ ಉದ್ಘಾಟನೆ ಹಾಗೂ 2025-26ನೇ ಶೈಕ್ಷಣಿಕ ವರ್ಷದ ಸ್ನಾತಕೋತ್ತರ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಬುಧವಾರ ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮ್ಮ ಕೊಪ್ಪಳ ವಿಶ್ವ ವಿದ್ಯಾಲಯದಲ್ಲಿ ಮಾತ್ರ ಭೂಗೋಳಶಾಸ್ತ್ರ ಅಧ್ಯಯನ ಪ್ರಾರಂಭವಾಗಿದೆ. ಭೂಗೋಳಶಾಸ್ತ್ರ ವಿಭಾಗವು ಕೊಪ್ಪಳ ಭಾಗದ ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳನ್ನು, ಸಂಶೋಧನೆಯ ಹೊಸ ದಾರಿಗಳನ್ನು ತೆರೆದಿಡುತ್ತದೆ ಎಂಬ ವಿಶ್ವಾಸ ನನಗಿದೆ ಹಾಗೂ ಭೂಗೋಳಶಾಸ್ತ್ರ ಅಧ್ಯಯನದ ಮೂಲಕ ವಿದ್ಯಾರ್ಥಿಗಳು ಪರಿಸರದ ಸಂರಕ್ಷಣೆ, ಭೂಮಿಯ ಸಂಪನ್ಮೂಲಗಳ ಸದುಪಯೋಗ, ಹವಾಮಾನ ಬದಲಾವಣೆಗಳ ವಿಶ್ಲೇಷಣೆ, ನಗರೀಕರಣದ ಸಮಸ್ಯೆ ಮತ್ತು ಭವಿಷ್ಯದ ಅಭಿವೃದ್ಧಿಯ ದಾರಿಗಳನ್ನು ಅರಿತುಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ಯಲಬುರ್ಗಾ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಛತ್ರದ, ವಿವಿಧ ವಿಭಾಗಗಳ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News