×
Ad

ಕೊಪ್ಪಳ | ಬಲ್ಡೋಟಾ ತೊಲಗಿಸಿ ಹೋರಾಟಕ್ಕೆ ಸಂಘಟನೆಗಳ ಬೆಂಬಲ

ಹೋರಾಟವನ್ನು ಕಾಯ್ದುಕೊಂಡು ಬಂದಿರುವುದೇ ಸಾಧನೆ : ಭೂಮರೆಡ್ಡಿ

Update: 2025-11-02 23:43 IST

ಕೊಪ್ಪಳ : ನಗರಕ್ಕೆ ಹೊಂದಿಕೊಂಡು ಬೃಹತ್ ಕಾರ್ಖಾನೆ ಸ್ಥಾಪಿಸುವುದಕ್ಕೆ ಅನುಮತಿ ಕೊಟ್ಟ ಆಡಳಿತ ಮತ್ತು ಸರಕಾರದ ತಪ್ಪುಗಳನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟವನ್ನು ಇಲ್ಲಿಯವರೆಗೆ ಕಾಯ್ದುಕೊಂಡು ಬಂದಿರುವುದೇ ದೊಡ್ಡ ಸಾಧನೆ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ ಹೇಳಿದ್ದಾರೆ.

ನಗರಸಭೆ ಸಂಕೀರ್ಣದ ಮುಂದೆ ಜಂಟಿ ಕ್ರಿಯಾ ವೇದಿಕೆ (ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ) ಮೂಲಕ ಹಮ್ಮಿಕೊಂಡಿರುವ ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ, ಮುಕುಂದ ಸುಮಿ, ಎಕ್ಸ್ ಇಂಡಿಯಾ ಸೇರಿ ಎಲ್ಲ ಕಾರ್ಖಾನೆಗಳ ವಿಸ್ತೀರ್ಣ ಮತ್ತು ಆರಂಭವನ್ನು ವಿರೋಧಿಸಿ ಅನಿರ್ದಿಷ್ಟವಾಧಿ ಧರಣಿ ಸತ್ಯಾಗ್ರಹದ ಎರಡನೇ ದಿನ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ಅಂದರೆ ಅದು ಇಲ್ಲಿರುವ ಆರೋಗ್ಯ ಕೆಡಿಸುವುದಲ್ಲ. ಮೊದಲು ಜೀವ ಮತ್ತು ಆರೋಗ್ಯ; ಆನಂತರವಷ್ಟೇ ಉದ್ಯೋಗ. ಬೇಕಾದರೆ ಉದ್ಯೋಗ ಸೃಜನೆಯ, ಮಾಲಿನ್ಯಕಾರಕವಲ್ಲದ ಕಾರ್ಖಾನೆಗಳನ್ನು ಸ್ಥಾಪಿಸಲಿ.ಅಲ್ಲದೆ ಈ ಹೋರಾಟ ನಗರದ ಪ್ರತಿಯೊಬ್ಬರ, ಬಾಧಿತಗೊಂಡ ಹಳ್ಳಿಗಳ ಜನರದ್ದಾಗಿದೆ. ಇದಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತದೆ ಎಂದರು.

ಕೃಷಿಬೆಲೆ ಆಯೋಗದ ಸದಸ್ಯಡಿ.ಎಚ್. ಪೂಜಾರ, ಮಹಿಳಾ ಹೋರಾಟಗಾರ್ತಿ ಸಾವಿತ್ರಿ ಮುಜುಮದಾರ, ಹೈಕೋರ್ಟ್ ವಕೀಲ ಮಂಜುನಾಥ ಬಾಗೆಪಲ್ಲಿ ಮಾತನಾಡಿದರು.

ಗುತ್ತಿಗೆದಾರರಾದ ಕೃಷ್ಣಾ ಎಂ. ಇಟ್ಟಂಗಿ, ಹನುಮೇಶ ಕಡೇಮನಿ, ಸುಕರಾಜ ತಾಳಕೆರಿ, ಬಿ.ವಿರುಪಾಕ್ಷಿ ಕಿನ್ನಾಳ, ದೇವಪ್ಪ ಅರಕೇರಿ, ಜಿ.ವಿ.ಅಂಗಡಿ, ಜಿ. ಶ್ರೀನಿವಾಸುರಾವು, ಶಿವಪುತ್ರಪ್ಪ ಹತ್ತಿ, ಬಿ. ಮಾರುತಿ, ಎಲ್. ಎಂ. ಮಲ್ಲಯ್ಯ, ವಿಶ್ವನಾಥ ತಮ್ಮಣ್ಣರ, ವೀರಣ್ಣ ಹುಣಸಿಮರದ, ಶ್ರೀಧರ ಬನ್ನಿಕೊಪ್ಪ, ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಕೆ. ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಮಹಾಂತೇಶ ಕೊತಬಾಳ, ಡಾ. ಮಂಜುನಾಥ ಸಜ್ಜನ, ಭೀಮಸೇನ ಕಲಕೇರಿ, ಯಲ್ಲಪ್ಪ ಬಂಡಿ, ಬಸವರಾಜ. ಎನ್. ಯರದಿಹಾಳ, ರಮೇಶ ಪಾಟೀಲ್ ಬೇರಗಿ, ವಕೀಲ ಎಸ್. ಎಚ್. ಇಂಗಳದಳ್ಳಿ, ಶಾಂತಯ್ಯ ಅಂಗಡಿ, ಹನುಮಂತಪ್ಪ ಗೊಂದಿ, ಬಸವರಾಜ ಶೀಲವಂತರ, ಫಾಸ್ಟರ್ ಅಸೋಸಿಯೇಶನ್ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್, ಎಸ್. ಎ. ಗಫಾರ್, ಮಖ್ಬೂಲ್ ರಾಯಚೂರು, ಶಿವಪ್ಪ ಹಡಪದ, ಬಸವರಾಜ ನರೇಗಲ್, ದುರುಗೇಶ ಹಿರೇಮನಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಸುಂಕಮ್ಮ ಗಾಂಧಿನಗರ, ಗಂಗಮ್ಮ, ಭೀಮಪ್ಪ ಯಲಬುರ್ಗಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News