×
Ad

ಕೊಪ್ಪಳ | ಅ.18ರಂದು ತಿರುಳುಗನ್ನಡ ನಾಡಿನಲ್ಲಿ ಸೂಫಿಸಂತರ ಸಮಾವೇಶ

Update: 2025-10-17 21:53 IST

ಕೊಪ್ಪಳ: ಪ್ರವಾದಿ ಮುಹಮ್ಮದ್ ಅವರ 1,500ನೇ ಹುಟ್ಟು ಹಬ್ಬದ ಪ್ರಯುಕ್ತ ನಡೆಯಲಿರುವ ಸೂಫಿ ಸಂತರ ಸಮಾವೇಶಕ್ಕೆ ತಿರುಳುಗನ್ನಡ ನಾಡು ಸಾಕ್ಷಿಯಾಗಲಿದೆ.

ನಾಳೆ ಶನಿವಾರ ಕೊಪ್ಪಳ ನಗರದ ಪಬ್ಲಿಕ್ ಗ್ರೌಂಡ್‌ನಲ್ಲಿ ವಿಶ್ವ ಶಾಂತಿ ಸಂದೇಶ ನೀಡುವ ಸೂಫಿ-ಸಂತರ ಸಮಾವೇಶ ನಡೆಯಲಿದ್ದು, ಈ ಸಮಾವೇಶದಲ್ಲಿ ನಾಡಿನ ಎರಡು ಭಾವೈಕ್ಯತೆಯ ತಾಣಗಳಾದ ಕಲಬುರ್ಗಿಯ ಪ್ರಸಿದ್ಧ ಖಾಜ ಬಂದೇ ನವಾಜ ದರ್ಗಾದ ಪೀಠಾಧಿಪತಿಗಳು ಮತ್ತು ಶರಣಬಸವೇಶ್ವರ ಮಠದ ಪೀಠಾಧಿಪತಿಗಳು ಆಗಮಿಸಲಿದ್ದು, ಇವರನ್ನು ನಗರದ ಗಡಿಯಾರದ ಕಂಬ ವೃತ್ತದಿಂದ ಸಮಾವೇಶದ ಸ್ಥಳಕ್ಕೆ ಭವ್ಯ ಮೆರವಣಿಗೆಯ ಮೂಲಕ ಕರೆ ತರಲಾಗುತ್ತಿದೆ. ಇದರಲ್ಲಿ ಇನ್ನೋಂದು ವಿಷೇಶವೆಂದರೆ ಕೊಪ್ಪಳಕ್ಕೆ ಇಬ್ಬರು ಪೀಠಾಧಿಪತಿಗಳು ಪ್ರಥಮಬಾರಿಗೆ ಆಗಮಿಸುತ್ತಿರುವುದು.

ಇದೊಂದು ಐತಿಹಾಸಿಕ ಕಾರ್ಯ ಕ್ರಮವಾಗಿದ್ದು, ಇದರ ಮೂಲಕ ಮುಹಮ್ಮದ್ ಪೈಗಂಬರ್‌ವರ ಶಾಂತಿಯ ಸಂದೇಶ ಹರಡುವ ಕೆಲಸ ಇದಾಗಿದೆ. ಈ ಸಮಾವೇಶದಲ್ಲಿ ಈ ಭಾಗದ ಎಲ್ಲಾ ಮಠಾಧಿಶರನ್ನು ಮತ್ತು ಸೂಫಿ ಸಂತರನ್ನು ಆಹ್ವಾನಿಸಲಾಗಿದ್ದು, ಎಲ್ಲಾರು ಭಾಗವಹಿಸುವ ನಿರಿಕ್ಷೆ ಇದೆ. ಜೊತೆಗೆ ಉತ್ತರ ಕರ್ನಾಟದ ಎಲ್ಲಾ ಮುಸ್ಲಿಂ ಮುಖಂಡರು ಮತ್ತು ಸಚಿವರು ಈ ಭಾವೈಕತೆಯ ಸಮಾವೇಶಕ್ಕೆ ಬರಲಿದ್ದಾರೆ ಎಂದು ಸಂಘಟಕರು ಹೇಳುತ್ತಿದ್ದಾರೆ.

ಸಮಾವೇಶದ ಉದ್ಘಾಟನೆಯನ್ನು ಖಾಜಾ ಬಂದೇ ನವಾಜ್ ಗುರುಗಳು ಸಜ್ಜಾದೆ ನಶೀನ್ ಅಲಿ ಹುಸೇನಿ, ಫಕೀರೇಶ್ ಸ್ವಾಮಿಜಿ, ಸವಣೂರಿನ ಸ್ವಾಮಿಜಿ, ಕಲಬುರಗಿಯ ದೊಡ್ಡ ಬಸಪ್ಪ ಅಪ್ಪ ಪೀಠಾಧಿಪತಿಗಳು ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು ನೆರವೇರಿಸಲಿದ್ದು, ಕೊಪ್ಪಳದ ಗವಿಮಠದ ಸ್ವಾಮಿಜಿಗಳನ್ನೂ ಆಹ್ವಾನಿಸಲಾಗಿದೆ.

ಇವರನ್ನು ಹೊರತು ಪಡಿಸಿ ಸಚಿವರಾದ ಎಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ್, ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ, ಬಸವರಾಜ್ ರಾಯರಡ್ಡಿ, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿಯವರು ಸೇರಿದಂತೆ ಇತರ ಗಣ್ಯರು ಆಗಮಿಸಲಿದ್ದಾರೆ.

ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸುಮಾರು 13 ಸಾವಿರಕ್ಕೂ ಹೆಚ್ಚು ಜನರು ಕುಳಿತುಕೊಳ್ಳಲು ವ್ಯವಸ್ಥೆಮಾಡಲಾಗಿದೆ ಮತ್ತು ವಾಹನ ಸಂಚಾರಕ್ಕೂ ವ್ಯವಸ್ಥೆಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News