ಕುಕನೂರು | ತೋಳ ದಾಳಿ : 12 ಕುರಿಗಳು ಸಾವು
Update: 2025-12-26 19:59 IST
ಕುಕನೂರು : ತಾಲೂಕಿನ ಮಂಗಳೂರು ಗ್ರಾಮದ ಕುರಿಗಾಹಿ ಯಮನೂರಪ್ಪ ನಾಗಪ್ಪ ಕಟಗಿ ಅವರ ಕುರಿಗಳ ಹಿಂಡಿನ ಮೇಲೆ ತೋಳವೊಂದು ದಾಳಿ ಮಾಡಿದ್ದರಿಂದ 12 ಕುರಿಗಳು ಸಾವನ್ನಪ್ಪಿದ್ದ ಘಟನೆ ಗುರುವಾರ ಸಂಜೆ 6 ಘಂಟೆ ವೇಳೆ ನಡೆದಿದೆ.
ಮಂಗಳೂರು ಸೀಮೆಯಲ್ಲಿ ಕುರಿಗಳ ಹಿಂಡು ಬಿಟ್ಟ ಸಮಯದಲ್ಲಿ ಈ ಘಟನೆ ನಡೆದಿದೆ. ಸಾವಿರಾರು ರೂಪಾಯಿ ಬೆಲೆ ಬಾಳುವ ಕುರಿಗಳನ್ನು ತೋಳ ತಿಂದು ಹಾಕಿದೆ ಎಂದು ಮೂಲಗಳು ತಿಳಿಸಿವೆ.
ಗ್ರಾಮದ ಪಶು ವೈದ್ಯಾಧಿಕಾರಿ ಬಾಪುಗೌಡ ಪಾಟೀಲ ಹಾಗೂ ಡಾ.ಸುಷ್ಮಾ ಮತ್ತು ಅರಣ್ಯ ಇಲಾಖೆ ಅಧಿಕಾರಿ ಸಂತೋಷ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕುರಿಗಳಿಂದಲೇ ನಮ್ಮ ಕುಟುಂಬದ ಜೀವನ ಸಾಗುತ್ತಿತ್ತು ಈ ಘಟನೆಯಿಂದ ನಮ್ಮ ಪರಿಸ್ಥಿತಿ ಚಿಂತಾ ಜನಕ ಸ್ಥಿತಿಯಲ್ಲಿದೆ ದಯವಿಟ್ಟು ನಮಗೆ ಸರಕಾರದಿಂದ ಪರಿಹಾರ ನೀಡಬೇಕೆಂದು ಕುರಿಗಾಗಿ ಯಮನೂರಪ್ಪ ನಾಗಪ್ಪ ಕಟಗಿ ಕೇಳಿಕೊಂಡಿದ್ದಾರೆ.