×
Ad

ಬಾಹ್ಯಾಕಾಶದಿಂದ ಚಂಡಮಾರುತ ಬಿಪೊರ್‌ಜಾಯ್‌ ಚಿತ್ರಗಳನ್ನು ಸೆರೆಹಿಡಿದ ಯುಎಇ ಗಗನಯಾತ್ರಿ ಸುಲ್ತಾನ್‌ ಅಲ್‌ನೆಯಾದಿ

Update: 2023-06-15 13:53 IST

Photo: Twitter/Sultan al neyadi

ಹೊಸದಿಲ್ಲಿ: ಬಾಹ್ಯಾಕಾಶದಿಂದ ಚಂಡಮಾರುತ ಬಿಪರ್‌ಜೋಯ್‌ ಚಿತ್ರವನ್ನು ಯುಎಇ ಯ ಇಬ್ಬರು ಗಗನಯಾತ್ರಿಗಳಲ್ಲೊಬ್ಬರಾದ ಸುಲ್ತಾನ್‌ ಅಲ್‌ನೆಯಾದಿ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ.

ಅರಬ್ಬೀ ಸಮುದ್ರದಲ್ಲಿನ ಈ ಚಂಡಮಾರುತದ ಅದ್ಭುತ ಚಿತ್ರಗಳು ಸಾವಿರಾರು ಮಂದಿಯ ಗಮನ ಸೆಳೆದಿವೆ. ಎರಡು ದಿನಗಳ ಅವಧಿಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ನಾನು ಸೆರದಿರುವ ಚಿತ್ರಗಳು ಎಂದು ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇಂದು ಗುಜರಾತ್‌ಗೆ ಅಪ್ಪಳಿಸಲಿದೆ ಎಂದು ಹೇಳಲಾದ ಚಂಡಮಾರುತದ ವೀಡಿಯೋವನ್ನೂ ಕೂಡ ಈ ಹಿಂದೆ ಅಲ್‌ನೆಯಾದಿ ಶೇರ್‌ ಮಾಡಿದ್ದರು. ಈ ವೀಡಿಯೋದಲ್ಲಿ ಚಂಡಮಾರುತದ ಕೇಂದ್ರಬಿಂದು ಮತ್ತು ಅದು ಎಷ್ಟು ದೂರ ಹರಡಿಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News