×
Ad

ಒಡಿಶಾದಿಂದ ಮೈಸೂರಿಗೆ ಕಾರಿನಲ್ಲಿ ಸಾಗಿಸುತ್ತಿದ್ದ 32 ಕೆಜಿ ಗಾಂಜಾ ವಶ; ಇಬ್ಬರ ಬಂಧನ

Update: 2025-05-08 16:21 IST

ಮೈಸೂರು: ಒಡಿಶಾ ರಾಜ್ಯದಿಂದ ಮೈಸೂರಿಗೆ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 32 ಕೆಜಿ 156 ಗ್ರಾಂ ನಿಷೇಧಿತ ಗಾಂಜಾವನ್ನು ಮೈಸೂರಿನ ಸಿಸಿಬಿ ಪೊಲೀಸರು ದಾಳಿ ನಡೆಸಿ ಕಾರು ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣ ಸಂಬಂಧ ಒಡಿಶಾ ರಾಜ್ಯದ ಮಿಥುನ್ ದಾಲಿ(36) ಮತ್ತು ಬಬೂಲಾ ಮದಿ(33) ಎಂಬವರನ್ನು ಬಂಧಿಸಿ ಮತ್ತು ಕಾರಿನಲ್ಲಿದ್ದ ಗಾಂಜಾ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ವಶಕ್ಕೆ ಪಡೆದಿರುವ ಇಬ್ಬರು ಆರೋಪಿಗಳು ಅಂತರ್‌ರಾಜ್ಯ ಪೆಡ್ಲರ್‌ಗಳಾಗಿದ್ದು, ಗಾಂಜಾವನ್ನು ಮೈಸೂರಿನಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೈಸೂರು ನಗರ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು ಹಾಗೂ ಸಿಸಿಬಿ ಎಸಿಪಿ ಮುಹಮ್ಮದ್ ಶರೀಫ್ ರಾವುತರ್ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ಶಬ್ಬಿರ್ ಹುಸೇನ್, ಪಿಎಸ್‌ಐ ಲೇಪಾಕ್ಷ, ಕೆ.ರಾಜು ಕೋನಕೇರಿ, ಸುಪ್ರಿಯಾ ಮತ್ತು ಎಎಸ್‌ಐ ನಾಗೇಶ್, ಸತೀಶ್ ಹಾಗೂ ಸಿಬ್ಬಂದಿಗಳಾದ ರವಿಕುಮಾರ್, ಮಧುಕುಮಾರ್, ಅನಿಲ್, ಪುರುಷೋತ್ತಮ್, ಮೋಹನಾರಾಧ್ಯ, ದೇವರಾಜು, ದೊಡ್ಡಗೌಡ, ರಾಜು, ಶ್ರೀನಿವಾಸ, ಹಾಗೂ ಮಮತ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

ಈ ಸಂಬಂಧ ಮೈಸೂರು ನಗರದ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News