×
Ad

ಚನ್ನಪಟ್ಟಣ ಉಪಚುನಾವಣೆಯಲ್ಲಿ ನಾನೇ ಅಭ್ಯರ್ಥಿ : ಡಿ‌.ಕೆ.ಶಿವಕುಮಾರ್

Update: 2024-10-13 16:17 IST

ಮೈಸೂರು : ಚನ್ನಪಟ್ಟಣ ಉಪಚುನಾವಣೆಯಲ್ಲಿ ನಾನೇ ಅಭ್ಯರ್ಥಿ. ವ್ಯಕ್ತಿ ಆಧಾರಿತದಲ್ಲಿ ಚುನಾವಣೆ ನಡೆಯಲ್ಲ, ಪಕ್ಷದ ಸಿದ್ಧಾಂತ ಮೇಲೆ ಚುನಾವಣೆ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಿ‌.ಕೆ.ಶಿವಕುಮಾರ್ ತಿಳಿಸಿದರು.

ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಲೋಕಸಭಾ ಚುನಾವಣೆಯಲ್ಲಿ ಸ್ವಲ್ಪ ಮಟ್ಟಿಗೆ ನಮಗೆ ಹಿನ್ನಡೆಯಾಗಿ ಸೋಲಬೇಕಾಯಿತು. ಆದರೆ ಈಗ ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

"ನಮ್ಮ ವಿರುದ್ಧ ಎನ್.ಡಿ.ಎ ಅಭ್ಯರ್ಥಿ ಹಾಕುತ್ತಾರೊ, ಅಥವಾ ಇನ್ಯಾರು ನಿಲ್ಲುತ್ತಾರೊ ತಲೆಕೆಡಿಸಿಕೊಳ್ಳುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ಅಲ್ಲಿ ಬಲಪಡಿಸುತ್ತಿದ್ದೇವೆ. ನಾನೇ ಅಭ್ಯರ್ಥಿಯಾಗಲಿದ್ದೇನೆ. ನನ್ನ ಹೆಸರಿನಲ್ಲೇ ಮತ ಕೇಳೋದು" ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News