×
Ad

ಸಿದ್ದರಾಮಯ್ಯ ಸಿಎಂ ಆದಾಗಲೆಲ್ಲಾ ಅರಮನೆ ವಿಚಾರದಲ್ಲಿ ಗೊಂದಲ ಮೂಡಿಸುತ್ತಾರೆ : ಎಚ್.ವಿಶ್ವನಾಥ್

Update: 2025-01-25 18:10 IST

ಎಚ್.ವಿಶ್ವನಾಥ್

ಮೈಸೂರು : ʼಸಿದ್ದರಾಮಯ್ಯ ಮುಖ್ಯಮಂತ್ರಿ ಅದಾಗಲೆಲ್ಲಾ ಅರಮನೆ ವಿಚಾರದಲ್ಲಿ ಗೊಂದಲ ಮೂಡಿಸುತ್ತಾರೆ. ಸುಗ್ರೀವಾಜ್ಞೆ ಹೊರಡಿಸುವ ಬದಲು ಮಹಾರಾಣಿ ಅವರೊಂದಿಗೆ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಬಹುದಿತ್ತು. ಅಧಿಕಾರ ಇದೆ ಎಂದು ಸುಗ್ರೀವಾಜ್ಞೆ ತರುವುದು ಸರಿಯಲ್ಲʼ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಮಹಾರಾಜರ ಬಗ್ಗೆ ಲಘುವಾಗಿ ಮಾತನಾಡುವುದು. ಅನಾವಶ್ಯಕ ಕಿರುಕುಳ ಕೊಡುತ್ತಿದ್ದಾರೆ. ರಸ್ತೆ ಹೆಸರಲ್ಲಿ ರಾಜರ ಹೆಸರು ತೆಗೆಯುವುದು. ನಾನು ಪ್ರಜಾಪ್ರಭುತ್ವವಾದಿ ಎಂದು ತೋರಿಸಿಕೊಳ್ಳಲು ಇದೆನ್ನೆಲ್ಲ ಮಾಡುತ್ತಿದ್ದಾರೆʼ ಎಂದು ತಿಳಿಸಿದರು.

ಲೋಕಾಯುಕ್ತ ಸರಕಾರದ ಕೈಗೊಂಬೆ: ʼಲೋಕಾಯುಕ್ತರಿಗೆ ಹುದ್ದೆ ಕೊಡುವುದು ಸರಕಾರ. ಅಧಿಕಾರಿಗಳು ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ. ಇಡೀ ದೇಶದಲ್ಲೇ ದೊಡ್ಡ ಮುಡಾದಂತಹ ಹಗರಣವಾಗಿಲ್ಲ. ಮೈಸೂರಿನವರೇ ಸಿಎಂ ಆಗಿರುವಾಗ, ಇದೆಲ್ಲ ಹಗರಣವಾಗಿದೆ. ಲೋಕಾಯುಕ್ತರು ಯಾವುದನ್ನೂ ಸರಿಯಾಗಿ ಪರಾಮರ್ಶೆ ಮಾಡಿಲ್ಲʼ ಎಂದು ಹೇಳಿದರು.

ಜನಾರ್ಧನರೆಡ್ಡಿ -ಶ್ರೀರಾಮುಲು ನಡುವೆ ವೈಮನಸ್ಸು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ʼಗಣಿ ದುಡ್ಡಲ್ಲಿ ಜನಾರ್ದನ ರೆಡ್ಡಿ ಗೆದ್ದಿದ್ದಾರೆ. ಶ್ರೀರಾಮುಲು ವಾಲ್ಮೀಕಿ ಸಮುದಾಯದ ಒಬ್ಬ ನಾಯಕ. ಅವರ ಬಗ್ಗೆ ರೆಡ್ಡಿ ಹೀಗೆಲ್ಲಾ ಮಾತನಾಡಬಾರದು. ವಾಲ್ಮೀಕಿ, ದಲಿತ, ಹಿಂದುಳಿದ ವರ್ಗಗಳಿಂದ ರೆಡ್ಡಿ ಗೆದ್ದಿರೋದು. ರಾಮುಲು ಬಗ್ಗೆ ಲಘುವಾಗಿ ಮಾತನಾಡಬಾರದುʼ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News