×
Ad

ಪಂಜಾಬ್‌ನ ಪಟಿಯಾಲ ಬಳಿ ಕಾರು ಅಪಘಾತ; ಕುರುಬೂರು ಶಾಂತಕುಮಾ‌ರ್ ಆಸ್ಪತ್ರೆಗೆ ದಾಖಲು

Update: 2025-02-14 20:30 IST

 ಕುರುಬೂರು ಶಾಂತಕುಮಾ‌ರ್ 

ಮೈಸೂರು : ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾ‌ರ್ ಚಂಡೀಗಡದಲ್ಲಿ ಶುಕ್ರವಾರ ನಡೆಯುತ್ತಿದ್ದ ರೈತರ ಸಭೆಗೆ ತೆರಳುತ್ತಿದ್ದ ವೇಳೆ ಪಂಜಾಬಿನ ಪಟಿಯಾಲ ಬಳಿ ಕಾರು ಅಪಘಾತವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪಂಜಾಬಿನ ಕನೋರಿ ಬಾರ್ಡ‌್ರನಲ್ಲಿಒಂದು ವರ್ಷದಿಂದ ಎಂ ಎಸ್ ಪಿ ಬೆಲೆಗಾಗಿ ಹೋರಾಟ ನಡೆಸುತ್ತಿರುವ ಸಂಯುಕ್ತಾ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ರಾಷ್ಟ್ರೀಯ ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್, ಸಂಘಟನೆಯ ಪದಾಧಿಕಾರಿಗಳು ಹಾಗೂ ರೈತ ಮುಖಂಡರ ಸಭೆಯನ್ನು ಚಂಡೀಗಢದಲ್ಲಿ ಶುಕ್ರವಾರ ಸಂಜೆ 5 ಗಂಟೆಗೆ ಕರೆದಿದ್ದರು. ಈ ಸಭೆಗೆ ಸಂಯುಕ್ತ ಕಿಸಾನ್ ಮೋರ್ಚಾದ ದಕ್ಷಿಣ ಭಾರತದ ಸಂಚಾಲಕ, ಕರ್ನಾಟಕದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹಾಗೂ ತಮಿಳುನಾಡಿನ ರೈತ ಸಂಘದ ಅಧ್ಯಕ್ಷ ಟಿ.ಆರ್.ಪಾಂಡಿಯನ್ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಕಾರು ಅಪಘಾತವಾಗಿದೆ ಎಂದು ತಿಳಿದು ಬಂದಿದೆ.

25ಕ್ಕೂ ಹೆಚ್ಚು ವಾಹನಗಳು ಚಂಡಿಘಡಕ್ಕೆ ಹೋಗುತ್ತಿದ್ದಾಗ ಮುಂದಿನ ವಾಹನ ಬ್ರೇಕ್ ಹಾಕಿದ ಪರಿಣಾಮ ಕಾರು ಡಿಕ್ಕಿ ಹೊಡೆದು ಅಪಘಾತವಾಗಿ ತಮಿಳುನಾಡಿನ ಪಾಂಡೆನ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಕುರುಬೂರು ಶಾಂತಕುಮಾರ್ ಅವರಿಗೂ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News