×
Ad

ಮೈಸೂರು | ಹೋಟೆಲ್‌ನಲ್ಲಿ ಸ್ಪೋಟಕ ವಸ್ತುಗಳು ಪತ್ತೆ : ತನಿಖೆ ಮುಂದುವರಿಕೆ

Update: 2024-08-23 21:49 IST

ಸ್ಪೋಟಕ

ಮೈಸೂರು : ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಕೆಂಪಯ್ಯನ ಹುಂಡಿ ಗ್ರಾಮದ ಗೇಟ್ ಬಳಿಯಿರುವ ಹೋಟೆಲ್‌ವೊಂದರಲ್ಲಿ ಗುರುವಾರ ರಾತ್ರಿ ಸ್ಪೋಟಕ ವಸ್ತುಗಳು ಪತ್ತೆಯಾಗಿದ್ದು, ಜಿಲ್ಲಾ ಪೊಲೀಸರು ಹಾಗೂ ಬಾಂಬ್ ತಜ್ಞರು ಅದನ್ನು ವಶಪಡಿಸಿಕೊಂಡಿದ್ದಾರೆ.

ವ್ಯಕ್ತಿಯೊಬ್ಬ ನೀಲಿ ಬಣ್ಣದ ಪ್ಲಾಸ್ಟಿಕ್ ಕವರ್‌ ಇಟ್ಟು ತೆರಳಿದ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಅಸ್ಪಷ್ಟವಾಗಿ ಸೆರೆಯಾಗಿದೆ. ಹೋಟೆಲ್‌ ಸಿಬ್ಬಂದಿಯು ಪರಿಶೀಲಿಸಿದಾಗ 9 ಡಿಟೊನೆಟರ್‌ಗಳು, 9 ಜಿಲೆಟಿನ್ ಜೆಲ್, ಒಂದು ಬಾಂಬ್ ಫ್ಯೂಸ್ ವೈರ್ ಕಂಡುಬಂತು. ತನಿಖೆ ಪ್ರಗತಿಯಲ್ಲಿದೆ ಎಂದು ಇನ್‌ಸ್ಪೆಕ್ಟರ್ ಧನಂಜಯ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News