×
Ad

ಮೈಸೂರು | ಮುಡಾ ಕಚೇರಿಯಲ್ಲಿ ಮುಂದುವರಿದ ಈಡಿ ಶೋಧ

Update: 2024-10-19 12:10 IST

ಮೈಸೂರು : ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಕ್ರಮ‌ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮೈಸೂರು ಮುಡಾ ಕಚೇರಿಗೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ತನಿಖಾ ತಂಡವು ಶನಿವಾರವೂ ಶೋಧ ಮುಂದುವರಿಸಿದೆ.

ಶುಕ್ರವಾರ ರಾತ್ರಿ ಮುಡಾ ಕಚೇರಿ ಒಳಗೇ ತಂಗಿದ್ದ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಶನಿವಾರ ಬೆಳಿಗ್ಗೆಯಿಂದಲೇ ತನಿಖೆ ಮುಂದುವರಿಸಿದ್ದಾರೆ. ಕಚೇರಿಯ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದ್ದು, ಒಳಗೆ ತನಿಖಾ ತಂಡವು 50:50 ನಿವೇಶನ ಹಂಚಿಕೆಗೆ ಸಂಬಂಧಿಸಿದ ಪ್ರತಿ ಮಾಹಿತಿಯನ್ನೂ ಕಲೆಹಾಕುತ್ತಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News