×
Ad

ನಂಜನಗೂಡು ನಗರಸಭೆ : ನಾಲ್ವರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು

Update: 2025-07-30 18:15 IST

ಮೈಸೂರು : ನಂಜನಗೂಡು ನಗರಸಭೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿ ಪಕ್ಷಾಂತರ ಮಾಡಿದ್ದ ನಾಲ್ವರು ಬಿಜೆಪಿ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿ ಜಿಲ್ಲಾ ದಂಡಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ ಅವರು ಆದೇಶ ಹೊರಡಿಸಿದ್ದಾರೆ.

ನಗರಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಬಹುಮತ ಪಡೆದಿದ್ದರೂ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶ್ರೀಕಂಠಸ್ವಾಮಿ ಗೆಲುವು ಸಾಧಿಸಿದ್ದರು. ಬಿಜೆಪಿಯಿಂದ ಗೆದ್ದಿದ್ದ ನಾಲ್ವರು ಸದಸ್ಯರಾದ 1ನೇ ವಾರ್ಡ್‌ನ ಗಿರೀಶ್‌ ಕುಮಾರ್, 12ನೇ ವಾರ್ಡ್‌ನ ಗಾಯತ್ರಿ ಮುರುಗೇಶ್‌, 22ನೇ ವಾರ್ಡ್‌ನ ಮೀನಾಕ್ಷಿ ನಾಗರಾಜ್‌ ಹಾಗೂ 27ನೇ ವಾರ್ಡ್‌ನ ವಿಜಯಲಕ್ಷ್ಮಿ ಕುಮಾರ್ ಅವರು ಪಕ್ಷದ ವಿಪ್‌ ಅನ್ನು ಉಲ್ಲಂಘಿಸಿ, ಮತ ಚಲಾಯಿಸದೇ ಗೈರಾಗಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಕಾರಣರಾಗಿದ್ದರು.

ಬಿಜೆಪಿಯ ನಂಜನಗೂಡು ನಗರಾಧ್ಯಕ್ಷ ಸಿದ್ದರಾಜು ಮತ್ತು ಸದಸ್ಯರಾದ ದೇವ ಅವರು 2024ರ ಅಕ್ಟೋಬರ್ 29ರಂದು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ದಂಡಾಧಿಕಾರಿಗಳ ನ್ಯಾಯಾಲಯವು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News