×
Ad

ಸಿಎಂ ರೇಸ್‌ನಲ್ಲಿ ನಾನಿಲ್ಲ; ಸಿದ್ದರಾಮಯ್ಯ ಐದು ವರ್ಷಕ್ಕೆ ಸಿಎಂ ಆಗಿ ಆಯ್ಕೆ ಆಗಿರುವುದು : ಸತೀಶ್ ಜಾರಕಿಹೊಳಿ

Update: 2026-01-05 14:59 IST

ಸತೀಶ್ ಜಾರಕಿಹೊಳಿ

ಮೈಸೂರು : ಬಜೆಟ್ ಬಳಿಕ ಅಧಿಕಾರ ಹಂಚಿಕೆಯಾಗುತ್ತದೆ ಎಂದು ನಾನು ಹೇಳಿಲ್ಲ. ನಾನು ಸಿಎಂ ರೇಸ್ ನಲ್ಲೂ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಮೈಸೂರಿನಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಐದು ವರ್ಷಕ್ಕೆ ಸಿಎಂ ಆಗಿ ಆಯ್ಕೆ ಆಗಿರುವುದು.  ಈ ಬಗ್ಗೆ ನಾವು ಹಲವು ಬಾರಿ ಹೇಳಿಕೆ ನೀಡಿದ್ದೇವೆ. ಸಿಎಂ ಸಹ ಹಲವು ಬಾರಿ ಹೇಳಿದ್ದಾರೆ. ಮತ್ತೆ ಈ ಬಗ್ಗೆ ಚರ್ಚೆ ಬೇಡ ಎಂದರು.

ಅಧಿಕಾರ ಹಂಚಿಕೆ ನಿರ್ಧಾರ ಮಾಡುವ ಸ್ಥಾನದಲ್ಲೂ ನಾನು ಇಲ್ಲ. ನಾನು ಸಿಎಂ ರೇಸ್ ನಲ್ಲೂ ಇಲ್ಲ. ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಚರ್ಚೆ ಇಲ್ಲ, ಬಂದಾಗ ನೋಡೋಣ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News