×
Ad

ಪಕ್ಷದಲ್ಲಿನ ಕೆಲ ಗೊಂದಲಗಳಿಂದ ಸರಕಾರಕ್ಕೆ ಹಾನಿ ಆಗುತ್ತಿರುವುದು ಸತ್ಯ : ತನ್ವೀರ್ ಸೇಠ್

Update: 2025-01-15 22:14 IST

ತನ್ವೀರ್ ಸೇಠ್

ಮೈಸೂರು : ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಂಪುಟ ಪುನರ್ ರಚನೆ ಸೇರಿದಂತೆ ಹಲವು ವಿಚಾರಗಳ ಗೊಂದಲಗಳಿಂದ ಸರಕಾರಕ್ಕೆ ಹಾನಿ ಆಗುತ್ತಿರುವುದು ಸತ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ತನ್ವೀರ್ ಸೇಠ್ ಹೇಳಿದರು.

ನಗದರಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿನ‌‌ ಕೆಲ ಗೊಂದಲಗಳಿಂದ ಸರಕಾರಕ್ಕೆ ಹಾನಿ ಆಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.

ಈ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ನೇರವಾಗಿಯೇ ಹೇಳಿದ್ದಾರೆ. ಅದಕ್ಕೆ ನನ್ನ ಸಮ್ಮತಿಯೂ ಇದೆ. ಕೆಪಿಸಿಸಿ ಅಧ್ಯಕ್ಷರನ್ನಾಗಿ ಯಾರನ್ನು ಮಾಡಬೇಕು ಎಂಬುದು ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ಇಂತವರನ್ನು ನೇಮಿಸಿ ಹೀಗೆ ಮಾಡಿ ಎಂದು ನಾನು ಹೇಳುವುದಕ್ಕೆ ಆಗುವುದಿಲ್ಲ ಎಂದರು.

ಸತೀಶ್ ಜಾರಕಿಹೊಳಿ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನು ಮಾಡಬೇಕಾದರೆ ಶಾಸಕರ ಅಭಿಪ್ರಾಯವನ್ನೇನು ಕೇಳಿರಲಿಲ್ಲ ತಾನೆ. ಈಗಲೂ ಹಾಗೆಯೇ ಹೈಕಮಾಂಡ್ ಒಬ್ಬರನ್ನು ತೀರ್ಮಾನಿಸಿರುತ್ತದೆ. ಅದನ್ನು ನಾವು ಒಪ್ಪಬೇಕು. ಸರಕಾರದಿಂದ ಪಕ್ಷವಲ್ಲ. ಪಕ್ಷದಿಂದ ಸರಕಾರ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News