×
Ad

ನಡುಪದವು:ಇಸ್ಮಾಯಿಲ್ ಹಾಜಿ ಮೂಲೆ ನಿಧನ

Update: 2023-12-30 16:00 IST

ಕೊಣಾಜೆ: ನಡುಪದವು ನಿವಾಸಿ ಇಸ್ಮಾಯಿಲ್ ಹಾಜಿ ಮೂಲೆ (ಮೂಲೆ ಮೋನು ಹಾಜಿ) ಅಲ್ಪ ಕಾಲದ ಅನಾರೋಗ್ಯದಿಂದ ಶನಿವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 80 ವರ್ಷ ಪ್ರಾಯವಾಗಿತ್ತು.

 ಹಿರಿಯ ಸಾಮಾಜಿಕ, ಧಾರ್ಮಿಕ ಮುಂದಾಳುವಾಗಿದ್ದ ಮೂಲೆ ಮೋನು ಅವರು ನಡುಪದವು ಜಮಾಅತಿನ ಮಾಜಿ ಅಧ್ಯಕ್ಷರಾಗಿದ್ದರು ಹಾಗೂ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಇವರ ನಿಧನಕ್ಕೆ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್, ಮುಖಂಡರಾದ ಇಬ್ರಾಹಿಂ ಹಾಜಿ ನಡುಪದವು, ಅಬ್ದುಲ್ ನಾಸೀರ್ ಕೆ.ಕೆ.ಎಸ್, ನಡುಪದವು ಅಲ್ ಉಮರ್ ಜುಮ್ಮಾ ಮಸೀದಿ ಅಧ್ಯಕ್ಷ ನಾಸೀರ್ ಎನ್.ಎಸ್, ನಝರ್ ಷಾ ,‌ಸಿ.ಎಂ.ಶೆರೀಫ್ ಚೆಂಬೆತೋಟ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

ಮೃತರು ಪತ್ನಿ, ಮೂವರು ಗಂಡು ಮಕ್ಕಳು, ಓರ್ವ ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News