×
Ad

ಉತ್ತರ ಪ್ರದೇಶ | ನೆರೆಮನೆಯ ವ್ಯಕ್ತಿಯಿಂದ 7 ವರ್ಷದ ಬಾಲಕನ ಹತ್ಯೆ; ʼದೇವರಿಗೆ ಬಲಿ ಕೊಡಲಾಗಿದೆʼ ಎಂದು ಕುಟುಂಬಸ್ಥರ ಆರೋಪ

"ದ್ವೇಷದ ಮಾತುಗಳು ದ್ವೇಷ, ಹಿಂಸೆಯನ್ನು ಸಹಜಗೊಳಿಸುತ್ತದೆ": ಘಟನೆ ಬಗ್ಗೆ ಕಾಂಗ್ರೆಸ್ ನಾಯಕ ಪವನ್ ಖೇರಾ ಕಳವಳ

Update: 2025-09-27 15:57 IST

ಶಹಝೇಬ್

ಲಕ್ನೋ: ಉತ್ತರ ಪ್ರದೇಶದ ಅಝಮ್‌ಗಢ ಜಿಲ್ಲೆಯಲ್ಲಿ ದೇವರಿಗೆ ಬಲಿ ನೀಡಲು 7 ವರ್ಷದ ಮುಸ್ಲಿಂ ಬಾಲಕನನ್ನು ಆತನ ನೆರೆಹೊರೆಯ ವ್ಯಕ್ತಿ ಹತ್ಯೆ ಮಾಡಿದ್ದಾನೆ ಎಂದು ಆತನ ಕುಟುಂಬ ಆರೋಪಿಸಿದೆ.

ಶಹಝೇಬ್ ಎಂಬ ಬಾಲಕ ಬುಧವಾರ ಸಂಜೆ ಟ್ಯೂಷನ್ ತರಗತಿ ಹೋಗಿ ನಾಪತ್ತೆಯಾಗಿದ್ದ. ಬಾಲಕನ ಮೃತದೇಹ ಮರುದಿನ ಬೆಳಿಗ್ಗೆ ಸಿಧಾರಿ ಪ್ರದೇಶದಲ್ಲಿ ಗೋಣಿಚೀಲದಲ್ಲಿ ಪತ್ತೆಯಾಗಿತ್ತು.

ನೆರೆಮನೆಯ ಶೈಲೇಂದ್ರ ಕುಮಾರ್ ನಿಗಮ್ ಈ ಕೃತ್ಯವನ್ನು ಎಸಗಿದ್ದಾನೆ. ಬಾಲಕ ನಾಪತ್ತೆಯಾಗುವ ಮೊದಲು ಶೈಲೇಂದ್ರ ಕುಮಾರ್ ಜೊತೆಗಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಗುರುವಾರ ಸಂಜೆ ಸಿದ್ಧಾರ್ಥ್ ಮತ್ತು ಮುಬಾರಕ್‌ಪುರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಶೈಲೇಂದ್ರ ಕುಮಾರ್ ನಿಗಮ್ ಮತ್ತು ರಾಜ ನಿಗಮ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಶಹಝೇಬ್ ಹತ್ಯೆ ಉತ್ತರ ಪ್ರದೇಶದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮಾಟ ಮಂತ್ರಕ್ಕೆ ಬಾಲಕನನ್ನು ಬಲಿಕೊಡಲಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಈ ಕೊಲೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಪವನ್ ಖೇರಾ, ನಮ್ಮ ಸಮಾಜ ಎಷ್ಟು ರೋಗಗ್ರಸ್ತ, ಕೊಳೆತ ಸಮಾಜವಾಗಿದೆ ಎಂದರೆ, ಒಬ್ಬ ನೆರೆಮನೆಯ ಹಿಂದೂ ವ್ಯಕ್ತಿ ಏಳು ವರ್ಷದ ಮುಸ್ಲಿಂ ಬಾಲಕನನ್ನು ಹತ್ಯೆ ಮಾಡಿ, ಅವನ ಮೃತ ದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ಗೇಟ್‌ನಿಂದ ನೇತು ಹಾಕುತ್ತಾರೆ. ದ್ವೇಷದ ಮಾತುಗಳು ದ್ವೇಷ, ಹಿಂಸಾಚಾರ, ಮತ್ತು ಕ್ರೂರತೆಯನ್ನು ಸಹಜವೆಂದು ತೋರುವಂತೆ ಮಾಡುತ್ತದೆ. ಇದು ಮಾನವೀಯತೆಯ ಕ್ಷಣಿಕ ವೈಫಲ್ಯವಲ್ಲ. ಇದು ನೇರವಾದ ಭಯೋತ್ಪಾದನೆ. ಕ್ರೂರತೆಯಲ್ಲಿ ಅಭ್ಯಾಸಗೊಂಡಿದ್ದು, ಮೌನದಿಂದ ರಕ್ಷಿಸಲ್ಪಟ್ಟಿದೆ. ಶಿಕ್ಷೆಯಿಲ್ಲದೆ ಕೃತ್ಯಕ್ಕೆ ಮಾನ್ಯತೆ ನೀಡಲಾಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News