ಚಂಡೀಗಢ ವಿಮಾನ ನಿಲ್ದಾಣದಲ್ಲಿ CISF ಅಧಿಕಾರಿಯಿಂದ ಕಪಾಳಮೋಕ್ಷ : ನೂತನ ಸಂಸದೆ ಕಂಗನಾ ರಾಣಾವತ್ ಆರೋಪ
Update: 2024-06-06 17:43 IST
ಕಂಗನಾ ರಾಣಾವತ್ | PC : PTI
ಚಂಡೀಗಢ : ಸಿಐಎಸ್ಎಫ್ ಅಧಿಕಾರಿ ಕುಲ್ವಿಂದರ್ ಕೌರ್ ಅವರು ದಿಲ್ಲಿಗೆ ವಿಮಾನವೇರಲು ಚಂಡೀಗಢ ವಿಮಾನ ನಿಲ್ದಾಣಕ್ಕೆ ಬಂದಾಗ ತಮಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿಯ ಸಂಸದರಾಗಿ ಆಯ್ಕೆಯಾಗಿರುವ ಕಂಗನಾ ರನೌತ್ ಆರೋಪಿಸಿದ್ದಾರೆ.
ದಿಲ್ಲಿಗೆ ಪ್ರಯಾಣಿಸಲು ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಪಾಯಿಂಟ್‌ಗೆ ತೆರಳುತ್ತಿದ್ದಾಗ, ಸಿಐಎಸ್‌ಎಫ್ ಅಧಿಕಾರಿ ಕುಲ್ವಿಂದರ್ ಕೌರ್, ಅವರು ಕಂಗನಾ ಅವರೊಂದಿಗೆ ಜಗಳವಾಡಿ, ಕಪಾಳಮೋಕ್ಷ ಮಾಡಿದರ ಎಂದು ಕಂಗನಾ ಹೇಳಿದ್ದಾರೆ.
ದಿಲ್ಲಿಗೆ ಆಗಮಿಸಿದ ನಂತರ, ಕಂಗನಾ ಅವರು ಸಿಐಎಸ್ಎಫ್ ಮಹಾನಿರ್ದೇಶಕ ನೀನಾ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.
ಕುಲ್ವಿಂದರ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಸಿಐಎಸ್‌ಎಫ್ ಕಮಾಂಡೆಂಟ್ ಕಚೇರಿಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.