ತೆಲಂಗಾಣ | ರಾಸಾಯನಿಕ ಕೇಂದ್ರದಲ್ಲಿ ಸ್ಪೋಟ: 14 ಮಂದಿಗೆ ಗಾಯ, ಹಲವರು ಮೃತಪಟ್ಟಿರುವ ಶಂಕೆ
Update: 2025-06-30 12:06 IST
Photo: PTI
ಹೈದರಾಬಾದ್ : ತೆಲಂಗಾಣದ ಪಾಶಮೈಲರಾಮ್‌ನಲ್ಲಿರುವ ಸಿಗಾಚಿ ರಾಸಾಯನಿಕ ಕೇಂದ್ರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದು, ಹಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಕಾರ್ಖಾನೆಯಲ್ಲಿ ರಿಯಾಕ್ಟರ್ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಘಟನೆಯಲ್ಲಿ ಸುಮಾರು 14 ಜನರು ಗಾಯಗೊಂಡಿದ್ದಾರೆ. 11 ಅಗ್ನಿಶಾಮಕ ದಳದ ವಾಹನಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.