×
Ad

Wildlife: ದೇಶದಲ್ಲಿ 2025ರಲ್ಲಿ 166 ಹುಲಿಗಳು ಸಾವು!

2024 ವರ್ಷಕ್ಕೆ ಹೋಲಿಸಿದರೆ 40 ಅಧಿಕ

Update: 2026-01-01 21:30 IST

ಸಾಂದರ್ಭಿಕ ಚಿತ್ರ | Photo Credit : PTI 

ಭೋಪಾಲ, ಜ. 1: ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳ ಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ 2025ರಲ್ಲಿ ವಿವಿಧ ಕಾರಣಗಳಿಂದ 166 ಹುಲಿಗಳು ಸಾವನ್ನಪ್ಪಿವೆ. ಈ ಸಂಖ್ಯೆ2024 ವರ್ಷ ದಾಖಲಾಗಿದ್ದ ಹುಲಿಗಳ ಸಾವಿನ ಸಂಖ್ಯೆಗೆ ಹೋಲಿಸಿದರೆ 40 ಹೆಚ್ಚು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‌ಟಿಸಿಎ)ದ ಇತ್ತೀಚಿನ ದತ್ತಾಂಶ ತಿಳಿಸಿದೆ.

ದೇಶದಲ್ಲಿ ‘ಹುಲಿಗಳ ರಾಜ್ಯ’ ಎಂದು ಕರೆಯಲಾಗುವ ಮಧ್ಯಪ್ರದೇಶದಲ್ಲಿ ಅತ್ಯಧಿಕ 55 ಹುಲಿಗಳು ಸಾವನ್ನಪ್ಪಿರುವುದನ್ನು ಕೂಡ ದತ್ತಾಂಶ ತೋರಿಸಿದೆ.

ಇತರ ರಾಜ್ಯಗಳಲ್ಲಿ ಕಳೆದ ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ 38, ಕೇರಳದಲ್ಲಿ 13 ಹಾಗೂ ಅಸ್ಸಾಂನಲ್ಲಿ 12 ಹುಲಿಗಳು ಸಾವನ್ನಪ್ಪಿರುವುದು ವರದಿಯಾಗಿದೆ. ಸಾವನ್ನಪ್ಪಿರುವ 166 ಹುಲಿಗಳಲ್ಲಿ 31 ಮರಿಗಳು ಎಂದು ಅಂಕಿ ಅಂಶಗಳು ತಿಳಿಸಿದೆ.

ಸ್ಥಳಾವಕಾಶದ ಕೊರತೆಯಿಂದ ಸ್ಥಳಕ್ಕಾಗಿ ನಡೆದ ಕಾದಾಟ ಹುಲಿಗಳ ಸಾವಿಗೆ ಪ್ರಮುಖ ಕಾರಣ ಎಂದು ತಜ್ಞರು ತಿಳಿಸಿದ್ದಾರೆ.

2024 ವರ್ಷಕ್ಕೆ ಹೋಲಿಸಿದರೆ ಭಾರತದಲ್ಲಿ 2025ರಲ್ಲಿ 40 ಹೆಚ್ಚು ಹುಲಿಗಳು ಸಾವನ್ನಪ್ಪಿವೆ. 2024ರಲ್ಲಿ 126 ಹುಲಿಗಳು ಸಾವನ್ನಪ್ಪಿದ್ದವು ಎಂದು ದತ್ತಾಂಶ ತೋರಿಸಿದೆ.

ಮೊದಲ ಹುಲಿ ಸಾವು ಜನವರಿ 2ರಂದು ಮಹಾರಾಷ್ಟ್ರದ ಬ್ರಹ್ಮಪುರಿ ಅರಣ್ಯ ವಿಭಾಗದಲ್ಲಿ ವರದಿಯಾಗಿದೆ. ಈ ಘಟನೆಯಲ್ಲಿ ಒಂದು ವಯಸ್ಕ ಗಂಡು ಹುಲಿ ಸಾವನ್ನಪ್ಪಿತ್ತು. ಇದಾದ ಮೂರು ದಿನಗಳ ಬಳಿಕ ಮಧ್ಯಪ್ರದೇಶದ ಪೆಂಚ್ ಹುಲಿ ಅಭಯಾರಣ್ಯದಲ್ಲಿ ಹೆಣ್ಣು ಹುಲಿಯೊಂದು ಸಾವನ್ನಪ್ಪಿತ್ತು.

ಮಧ್ಯಪ್ರದೇಶದ ಉತ್ತರ ಸಾಗರದಲ್ಲಿ ಡಿಸೆಂಬರ್ 28ರಂದು ವಯಸ್ಕ ಗಂಡು ಹುಲಿ ಸಾವನ್ನಪ್ಪಿರುವುದು ವರದಿಯಾಗಿದೆ. ಇದು ಇತ್ತೀಚೆಗೆ ವರದಿಯಾದ ಹುಲಿ ಸಾವು ಎಂದು ಎನ್‌ಟಿಸಿಎ ದತ್ತಾಂಶ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News