×
Ad

ಕೇರಳ | ಯೂಟ್ಯೂಬ್ ನೋಡಿಕೊಂಡು ಡಯಟ್ : ಪ್ರಾಣ ಕಳೆದುಕೊಂಡ 18ರ ಯುವತಿ

Update: 2025-03-09 21:05 IST

Photo | manoramanews

ಕಣ್ಣೂರು : ಕೇರಳದ ಕಣ್ಣೂರಿನಲ್ಲಿ 18ರ ಹರೆಯದ ಯುವತಿಯೋರ್ವಳು ಯೂಟ್ಯೂಬ್ ನೋಡಿಕೊಂಡು ಸಂಪೂರ್ಣ ತೂಕ ಇಳಿಸುವ ಡಯಟ್ ಪ್ಲಾನ್ ಅನುಸರಿಸಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಕಣ್ಣೂರಿನ ಕೂತುಪರಂಬ ಮೂಲದ ಶ್ರೀನಂದ ಅವರು ಅನೋರೆಕ್ಸಿಯಾ ನರ್ವೋಸಾದಿಂದ ಮೃತಪಟ್ಟಿದ್ದಾರೆ. ಈಕೆ ಮಟ್ಟನ್ನೂರಿನ ಪಯಶ್ಶಿರಾಜ ಎನ್ಎಸ್ಎಸ್ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿದ್ದರು. ತೂಕ ಕಡಿಮೆ ಮಾಡಲು ಯೂಟ್ಯೂಬ್ ನೋಡುತ್ತಾ ಡಯಟ್ ಮಾಡುತ್ತಿದ್ದ ಶ್ರೀನಂದ, ಆಹಾರವನ್ನು ಸರಿಯಾಗಿ ಸೇವಿಸುತ್ತಿರಲಿಲ್ಲ. ಇದರಿಂದ ದಿನಕಳೆದಂತೆ ಆಕೆಯ ಆರೋಗ್ಯವು ಕ್ಷೀಣವಾಯಿತು.

ಇತ್ತೀಚೆಗೆ ಆರೋಗ್ಯ ಹದಗೆಟ್ಟ ಹಿನ್ನೆಲೆ ಶ್ರೀನಂದ ಅವರನ್ನು ತಲಶ್ಶೇರಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆಕೆಯ ಸ್ಥಿತಿ ಗಂಭೀರವಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಕೋಝಿಕ್ಕೋಡ್‌ನ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ, ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಈ ಕುರಿತು ತಲಶ್ಶೇರಿಯ ವೈದ್ಯ ಡಾ.ನಾಗೇಶ್ ಪ್ರಭು ಅವರು ಪ್ರತಿಕ್ರಿಯಿಸಿ, ಶ್ರೀನಂದ ಅವರು ಅನೋರೆಕ್ಸಿಯಾ ನರ್ವೋಸಾ ಎಂಬ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News