×
Ad

ಹರ್ಯಾಣದಲ್ಲಿ ಹತ್ಯೆಯಾದ 19 ವರ್ಷದ ಇಮಾಮ್ ಹಿಂದೂ-ಮುಸ್ಲಿಂ ಐಕ್ಯತೆಗಾಗಿ ಪ್ರಾರ್ಥಿಸುತ್ತಿದ್ದ ವಿಡಿಯೋ ವೈರಲ್

Update: 2023-08-02 23:20 IST

ಗುರ್ಗಾಂವ್: ಗುರ್ಗಾಂವ್‌ನಲ್ಲಿ ಮಸೀದಿಗೆ ಬೆಂಕಿ ಹಚ್ಚಿ ಯುವ ಇಮಾಮ್ ಮೌಲಾನಾ ಹಫೀಝ್ ಸಾದ್ ರನ್ನು ಕೊಂದ ಬಳಿಕ ಅವರ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಲು ಪ್ರಾರಂಭಿಸಿದೆ. ಹಿಂದೂ-ಮುಸ್ಲಿಂ ಐಕ್ಯತೆಗಾಗಿ ಅವರು ಪ್ರಾರ್ಥಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾರತದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಐಕಮತ್ಯ ಮತ್ತು ಸೌಹಾರ್ದತೆಗಾಗಿ ಕರೆ ನೀಡುತ್ತಿರುವುದು ವೈರಲ್‌ ವಿಡಿಯೋದಲ್ಲಿ ಕಾಣಬಹುದು.

“ಹಿಂದೂಗಳು ಮತ್ತು ಮುಸ್ಲಿಮರು ಒಂದೇ ತಟ್ಟೆಯಿಂದ ರೊಟ್ಟಿಯನ್ನು ಮುರಿಯುವಂತಹ ಭಾರತವನ್ನು ನಿರ್ಮಿಸು ಓ ಅಲ್ಲಾಹ್‌” ಎಂದು ಸಾದ್‌ ಪ್ರಾರ್ಥಿಸಿದ್ದರು.

ಗುರ್ಗಾಂವ್‌ನ ಸೆಕ್ಟರ್ 57 ನಲ್ಲಿರುವ ಅಂಜುಮನ್ ಜಮಾ ಮಸೀದಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಾದ್‌ ಅವರ ಸಂದೇಶಕ್ಕೆ ಅನೇಕರು ಮಿಡಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News