×
Ad

ರಾಜಸ್ಥಾನ | ವಿದ್ಯುತ್ ತಂತಿ ಸ್ಪರ್ಶದಿಂದ ಬಸ್ ಬೆಂಕಿಗಾಹುತಿ : ಇಬ್ಬರು ಮೃತ್ಯು, ಹಲವರಿಗೆ ಗಾಯ

Update: 2025-10-28 20:27 IST

Photo : NDTV

ಜೆಪುರ, ಅ. 28: ಇಲ್ಲಿನ ಮನೋಹರಪುರ ಪ್ರದೇಶದಲ್ಲಿ ಮಂಗಳವಾರ ನೇತಾಡುತ್ತಿದ್ದ ವಿದ್ಯುತ್ ತಂತಿ ಸ್ಪರ್ಶದಿಂದ ಖಾಸಗಿ ಬಸ್‌ಗೆ ಬೆಂಕಿ ಹತ್ತಿಕೊಂಡಿದ್ದು, ಅದರಲ್ಲಿದ್ದ ಇಬ್ಬರು ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ ಹಾಗೂ ಇತರ 10 ಮಂದಿ ಗಾಯಗೊಂಡಿದ್ದಾರೆ.

ಈ ಬಸ್ ಕಾರ್ಮಿಕರನ್ನು ಉತ್ತರಪ್ರದೇಶದ ಮನೋಹರಪುರದ ಇಟ್ಟಿಗೆ ಗೂಡಿನಿಂದ ಪಿಲಿಬಿಟ್ಗೆ ಕರೆದೊಯ್ಯುತ್ತಿತ್ತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠ ತೇಜಪಾಲ್ ಸಿಂಗ್ ತಿಳಿಸಿದ್ದಾರೆ.

ಮನೋಹರಪುರದ ಗ್ರಾಮವೊಂದರ ಸಮೀಪದ ಕಚ್ಚಾ ರಸ್ತೆಯಲ್ಲಿ ಬಸ್ ಹಾದು ಹೋಗುತ್ತಿದ್ದ ಸಂದರ್ಭ ಹೈಟೆನ್ಶನ್ ತಂತಿಗೆ ಸ್ಪರ್ಶಿಸಿತು. ಈ ಸಂದರ್ಭ ಗ್ಯಾಸ್ ಸಿಲಿಂಡರ್ ಹಾಗೂ ಇತರ ಗೃಹೋಪಯೋಗಿ ವಸ್ತುಗಳು ಬಸ್‌ನ ಟಾಪ್‌ನಲ್ಲಿ ಇದ್ದುವು ಎಂದು ಅವರು ತಿಳಿಸಿದ್ದಾರೆ.

ಬಸ್ 11,000 ವೋಲ್ಟ್‌ನ ವಿದ್ಯುತ್ ತಂತಿಗೆ ಸ್ಪರ್ಶಿಸಿತು. ಇದರಿಂದ ಬಸ್‌ಗೆ ಬೆಂಕಿ ಹತ್ತಿಕೊಂಡಿತು ಎಂದು ಹೇಳಲಾಗಿದೆ. ಬೆಂಕಿಯನ್ನು ಅನಂತರ ನಂದಿಸಲಾಯಿತು ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News