×
Ad

ಕೇರಳ | ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರಿಗೆ ಖಾಸಗಿ ಬಸ್ ಢಿಕ್ಕಿ: ಮೂವರು ಮಹಿಳೆಯರಿಗೆ ಗಾಯ

Update: 2025-06-22 13:48 IST

Photo credit: onmanorama.com

ತ್ರಿಶೂರ್: ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರಿಗೆ ಖಾಸಗಿ ಬಸ್ ಒಂದು ಢಿಕ್ಕಿ ಹೊಡೆದ ಪರಿಣಾಮ, ಮೂವರು ಮಹಿಳೆಯರು ಗಾಯಗೊಂಡಿರುವ ಘಟನೆ ಶನಿವಾರ ಚೊವ್ವೂರ್ ನ ಅಂಚಮ್ಕಲ್ಲು ಬಳಿ ನಡೆದಿದೆ. ತ್ರಿಶೂರ್ ನಿಂದ ಕೊಡುಂಗಲ್ಲೂರ್ ಗೆ ತೆರಳುತ್ತಿದ್ದ ಅಲ್-ಅಸಾ ಸಾರಿಗೆ ಸಂಸ್ಥೆಯ ಬಸ್ ಒಂದು ನಿಯಂತ್ರಣ ಕಳೆದುಕೊಂಡು, ರಸ್ತೆಯಿಂದ ಮಗುಚಿ ಬಿದ್ದಿದೆ. ಈ ಘಟನೆಯ ವೇಳೆ, ಬಸ್ ವೇಗವಾಗಿ ಚಲಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.

ಈ ಅಪಘಾತದ ನಂತರ, ಬಸ್ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಆತನನ್ನು ಬೆನ್ನಟ್ಟಿದರೂ, ಗೋಡೆಯೊಂದನ್ನು ಹಾರಿ, ಸಮೀಪದ ಮೈದಾನವೊಂದರಲ್ಲಿ ಪರಾರಿಯಾಗುವಲ್ಲಿ ಆತ ಯಶಸ್ವಿಯಾಗಿದ್ದಾನೆ. ಈ ಅಪಘಾತದಲ್ಲಿ ಗಾಯಗೊಂಡಿರುವ ಮಹಿಳೆಯರ ಪೈಕಿ, ಪ್ರೇಮ ಎಂಬ ಹೆಸರಿನ ಮಹಿಳೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಈ ಮೂವರೂ ಗಾಯಾಳುಗಳನ್ನು ಕೂರ್ಕೆಂಚರಿಯಲ್ಲಿನ ಖಾಸಗಿ ಆಸ್ಪತ್ರೆಯೊಂದರ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News