×
Ad

450 ರೂ. ಸಬ್ಸಿಡಿ ದರದಲ್ಲಿ ಗೃಹ ಬಳಕೆಯ ಸಿಲಿಂಡರ್ ಪೂರೈಕೆ: ಮಧ್ಯಪ್ರದೇಶ ಸರಕಾರ ಘೋಷಣೆ

Update: 2023-09-15 10:35 IST

ಭೋಪಾಲ್: ಪ್ರಧಾನ ಮಂತ್ರಿ ಉಜ್ವಲ ಯೋಜನೆ ಹಾಗೂ ಮುಖ್ಯಮಂತ್ರಿ ಲಾಡ್ಲಿ ಬಹನಾ ಯೋಜನೆ ಅಡಿಯಲ್ಲಿ ಗ್ಯಾಸ್ ಸಂಪರ್ಕ ಹೊಂದಿರುವ ಎಲ್ಲರಿಗೂ ಸೆಪ್ಟೆಂಬರ್ 1 ರಿಂದ 450 ರೂ. ಸಬ್ಸಿಡಿ ದರದಲ್ಲಿ ಗೃಹ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗಳನ್ನು ಒದಗಿಸುವುದಾಗಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಮಧ್ಯಪ್ರದೇಶ ಸರಕಾರ ಗುರುವಾರ ಪ್ರಕಟಿಸಿದೆ. ರಾಜ್ಯ ಚುನಾವಣೆ ಸನಿಹವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಸರಕಾರದ ಮತದಾರರನ್ನು ಸೆಳೆಯಲು ಈ ಘೋಷಣೆ ಮಾಡಿದೆ ಎನ್ನಲಾಗಿದೆ.

ಸರಕಾರದ ಆದೇಶದ ಪ್ರಕಾರ, ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ ಎಲ್ಲಾ ಎಲ್ಪಿಜಿ ಗ್ಯಾಸ್ ಸಂಪರ್ಕ ಹೊಂದಿರುವವರು ಹಾಗೂ ಮುಖ್ಯಮಂತ್ರಿ ಲಾಡ್ಲಿ ಬಹನಾ ಯೋಜನೆಯಡಿ ನೋಂದಾಯಿಸಲ್ಪಟ್ಟವರು, ಅವರ ಸ್ವಂತ ಹೆಸರಿನಲ್ಲಿ ಗ್ಯಾಸ್ ಸಂಪರ್ಕಗಳನ್ನು ಹೊಂದಿರುವವರು ಸೆಪ್ಟೆಂಬರ್ 1, 2023 ರಿಂದ 450 ರೂ. ನಲ್ಲಿ ಗ್ಯಾಸ್ ಸಿಲಿಂಡರ್ ಮರುಪೂರಣವನ್ನು ಪಡೆಯಲು ಅರ್ಹರಾಗಿರುತ್ತಾರೆ.. ಅರ್ಹ ಗ್ರಾಹಕರು ಪ್ರತಿ ತಿಂಗಳು ಪ್ರತಿ ಮರುಪೂರಣದ ಮೇಲೆ ಸಬ್ಸಿಡಿಯನ್ನು ಪಡೆಯುತ್ತಾರೆ.

ಅರ್ಹ ಗ್ರಾಹಕರು ತೈಲ ಕಂಪನಿಯಿಂದ ಮಾರುಕಟ್ಟೆ ದರದಲ್ಲಿ ಮರುಪೂರಣಗಳನ್ನು ಖರೀದಿಸಬೇಕಾಗುತ್ತದೆ. ಭಾರತ ಸರಕಾರವು ಒದಗಿಸುವ ಸಬ್ಸಿಡಿಯಲ್ಲಿ ಯಾವುದೇ ಕಡಿತ ಹಾಗೂ ರಾಜ್ಯ ಸರಕಾರವು ನಿರ್ಧರಿಸುವ ಮಾರುಕಟ್ಟೆ ದರವನ್ನು ಅರ್ಹ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ದೇಶೀಯ LPG ಮರುಪೂರಣಗಳಿಗೆ ಮಾರುಕಟ್ಟೆ ದರದಲ್ಲಿ ತಿದ್ದುಪಡಿಯಾಗುವ ಸಂದರ್ಭದಲ್ಲಿ, ರಾಜ್ಯ ಸಬ್ಸಿಡಿಯನ್ನು ಸಹ ಅದಕ್ಕೆ ಅನುಗುಣವಾಗಿ ಸರಿಹೊಂದಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ, 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News