ಉತ್ತರ ಪ್ರದೇಶ: ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನೇಪಾಳದ 6 ಪ್ರಜೆಗಳು ಮೃತ್ಯು
Update: 2023-08-06 12:30 IST
ಶ್ರಾವಸ್ತಿ( ಯುಪಿ): ಎಸ್ ಯುವಿ ಮರಕ್ಕೆ ಡಿಕ್ಕಿ ಹೊಡೆದು ಹಳ್ಳಕ್ಕೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಆರು ನೇಪಾಳ ಪ್ರಜೆಗಳು ಸಾವನ್ನಪ್ಪಿರುವ ಘಟನೆ ಶ್ರಾವಸ್ತಿ ಜಿಲ್ಲೆಯ ಎಕೋನಾ ಪ್ರದೇಶದಲ್ಲಿ ನಡೆದಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.
ಶನಿವಾರ ಸಂಜೆ ಎಸ್ ಯುವಿ ಚಾಲಕ ರಸ್ತೆಯಲ್ಲಿ ಜಾನುವಾರುಗಳಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.
ಬಲಿಯಾದವರು ನೇಪಾಳದ ನೇಪಾಳಗಂಜ್ ನಗರದ ತ್ರಿಭುವನ್ ಚೌಕ್ ಪ್ರದೇಶದ ನಿವಾಸಿಗಳು ಎಂದು ಅವರು ಹೇಳಿದರು.
ಮೃತಟ್ಟವರನ್ನು ನಿಲನ್ಶ್ (36), ನಿತಿ (20), ದೀಪಿಕಾ (35), ವೈಭವ್ ಅಲಿಯಾಸ್ ಸೋನು (36) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟ ಅಪ್ರಾಪ್ತ ಮಕ್ಕಳ ಗುರುತು ಇನ್ನೂ ಪತ್ತೆಯಾಗಿಲ್ಲ.
ಎಸ್ ಯುವಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಬಹ್ರೈಚ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.