×
Ad

ಉತ್ತರ ಪ್ರದೇಶ | ಏಳು ವರ್ಷದ ಬಾಲಕನನ್ನು ಕತ್ತರಿಯಿಂದ ಚುಚ್ಚಿ ಹತ್ಯೆಗೈದ ಮಾದಕ ವಸ್ತು ವ್ಯಸನಿ!

Update: 2025-01-25 19:57 IST

Photo : ಸಾಂದರ್ಭಿಕ ಚಿತ್ರ

ಬಾಘ್ಪಟ್: ಮಾದಕ ವಸ್ತು ವ್ಯಸನಿಯೊಬ್ಬ ಏಳು ವರ್ಷದ ಬಾಲಕನಿಗೆ ಕತ್ತರಿಯಿಂದ ಚುಚ್ಚಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಬಾಘ್ಪಟ್ ಜಿಲ್ಲೆಯಲ್ಲಿ ನಡೆದಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

ಮೃತ ಬಾಲಕನು ಗುರುವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದ. ಆತನ ಮೃತ ದೇಹವು ಅದಮ್ ಪುರ್ ಗ್ರಾಮಕ್ಕೆ ಹೊಂದಿಕೊಂಡಂತಿರುವ ಕಾಡಿನ ಬಳಿಯಿರುವ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿತ್ತು. ಇದರ ಬೆನ್ನಿಗೇ ಮೃತ ಬಾಲಕನ ನೆರೆಮನೆಯವನಾದ ಶವೇಝ್ (19) ಎಂಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮೃತ ಅಫ್ಝಲ್ ಕಡೆಯದಾಗಿ ಗುರುವಾರ ಬೆಳಗ್ಗೆ 10 ಗಂಟೆಗೆ ಶವೇಝ್ ನೊಂದಿಗೆ ಕಂಡು ಬಂದಿದ್ದ. ಆತ ಯಾವಾಗ ಮನೆಗೆ ಮರಳಲಿಲ್ಲವೊ, ಆಗ ಆತನ ತಾಯಿ ಆತನಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾಳೆ. ಇದರ ಬೆನ್ನಿಗೇ ಶುಕ್ರವಾರ ಮೃತ ಬಾಲಕನ ಕುಟುಂಬದವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಮ್ಮ ಪುತ್ರನನ್ನು ಶವೇಝ್ ಅಪಹರಿಸಿದ್ದಾನೆ ಎಂದು ಮೃತ ಬಾಲಕನ ಕುಟುಂಬದವರು ದೂರು ನೀಡಿದ್ದರು. ಇದನ್ನು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ತಾನು ಬಾಲಕನನ್ನು ಹತ್ಯೆಗೈದಿರುವುದಾಗಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ ಎಂದು ಠಾಣಾಧಿಕಾರಿ ಬಚ್ಚು ಸಿಂಗ್ ಹೇಳಿದ್ದಾರೆ.

ಬಾಲಕನ ಮೃತ ದೇಹವನ್ನು ಕಬ್ಬಿನ ಗದ್ದೆಯಿಂದ ವಶಪಡಿಸಿಕೊಳ್ಳಲಾಗಿದ್ದು, ಅಲ್ಲಿಯೇ ಅಪರಾಧ ಕೃತ್ಯಕ್ಕೆ ಬಳಸಲಾಗಿದ್ದ ಕತ್ತರಿಯನ್ನೂ ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ಹೇಳಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿ ಶವೇಝ್ ಮಾದವ ವಸ್ತು ವ್ಯಸನಿಯಾಗಿದ್ದಾನೆ. ಬಾಲಕನನ್ನು ಯಾಕೆ ಕೊಂದೆ ಎಂದು ವಿಚಾರಣೆಗೊಳಪಡಿಸಿದಾಗ, ನಾನು ಹಾಗೆ ಸುಮ್ಮನೆ ಕತ್ತರಿಯಲ್ಲಿ ತಿವಿದೆ ಎಂದು ಆತ ಉತ್ತರಿಸಿದ್ದಾನೆ ಎಂದು ಹೇಳಲಾಗಿದೆ.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಠಾಣಾಧಿಕಾರಿ ಬಚ್ಚು ಸಿಂಗ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News