ಉದ್ಯೋಗಿಗಳ ಭವಿಷ್ಯ ನಿಧಿಯ ಮೇಲೆ 8.15 ಶೇ.ಬಡ್ಡಿ ದರ: ಕೇಂದ್ರ ಸರಕಾರ ಅನುಮೋದನೆ
Update: 2023-07-24 14:13 IST
ಹೊಸದಿಲ್ಲಿ: 2022-23ರ ಹಣಕಾಸು ವರ್ಷಕ್ಕೆ ತನ್ನ 6 ಕೋಟಿ ಚಂದಾದಾರರಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಶಿಫಾರಸು ಮಾಡಿದ ಶೇಕಡಾ 8.15 ರ ಬಡ್ಡಿ ದರವನ್ನು ಸರಕಾರ ಸೋಮವಾರ ಅನುಮೋದಿಸಿದೆ.
ಇಪಿಎಫ್ಒ ಇಂದು ಹೊರಡಿಸಿದ ಸುತ್ತೋಲೆಯಲ್ಲಿ, ಬಡ್ಡಿದರವನ್ನು ಸದಸ್ಯರ ಖಾತೆಗಳಿಗೆ ಜಮಾ ಮಾಡಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕೇಂದ್ರ ಸರ್ಕಾರದ ಅನುಮೋದನೆಯನ್ನು ತಿಳಿಸಿದೆ ಎಂದಿದೆ.
ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯವು ಬಡ್ಡಿ ದರದ ಶಿಫಾರಸನ್ನು ಅನುಮೋದನೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಿದೆ. ಬಡ್ಡಿ ದರಕ್ಕೆ ಸರಕಾರದ ಒಪ್ಪಿಗೆಯ ನಂತರ, EPFO ಈಗ EPF ಚಂದಾದಾರರಿಗೆ ಹಿಂದಿನ ಹಣಕಾಸಿನ ಬಡ್ಡಿದರವನ್ನು ಕ್ರೆಡಿಟ್ ಮಾಡಲು ಆರಂಭಿಸಲಿದೆ.