×
Ad

ರೈಲಿನಲ್ಲಿ ಸಂಚರಿಸಿ, ಪ್ರಯಾಣಿಕರೊಂದಿಗೆ ಬೆರೆತ ರಾಹುಲ್‌ ಗಾಂಧಿ ಪೋಟೋ ವೈರಲ್

Update: 2023-09-25 19:30 IST

ರಾಹುಲ್‌ ಗಾಂಧಿ |Photo: X \ @INCIndia

ರಾಯ್‌ಪುರ : ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಛತ್ತೀಸ್‌ಗಢದ ಬಿಲಾಸ್‌ಪುರದಿಂದ ರಾಜಧಾನಿ ರಾಯ್‌ಪುರಕ್ಕೆ ರೈಲಿನ ಮೂಲಕ ಪ್ರಯಾಣಿಸಿ, ಪ್ರಯಾಣಿಕರೊಂದಿಗೆ ಲಘು ಸಂಭಾಷಣೆಯಲ್ಲಿ ತೊಡಗಿದ ಫೊಟೋವನ್ನು ಕಾಂಗ್ರೆಸ್ ʼxʼ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ರೈಲಿನಲ್ಲಿ ರಾಯ್‌ಪುರಕ್ಕೆ ಹೊರಟಿದ್ದಾರೆ.

ರಾಹುಲ್ ಗಾಂಧಿ ಅವರೊಂದಿಗೆ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಪಕ್ಷದ ರಾಜ್ಯ ಉಸ್ತುವಾರಿ ಕುಮಾರಿ ಸೆಲ್ಜಾ ಮತ್ತು ರಾಜ್ಯ ಘಟಕದ ಮುಖ್ಯಸ್ಥ ದೀಪಕ್ ಬೈಜ್ ಇತರರು ಇದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News