×
Ad

ಕರ್ತವ್ಯದ ವೇಳೆ ʼಸನಾತನ ವಿರೋಧಿʼ ಎಂದು ಆರೋಪಿಸಿದ ಬಲಪಂಥೀಯರು; ʼಜೈ ಶ್ರೀರಾಮ್ʼ ಘೋಷಣೆ ಕೂಗಿದ ಗ್ವಾಲಿಯರ್ ಎಸ್‌ಪಿ ಹಿನಾ ಖಾನ್ !

Update: 2025-10-15 17:11 IST

Photo credit: indiatoday.in

ಭೋಪಾಲ್ : ಕರ್ತವ್ಯದಲ್ಲಿದ್ದ ವೇಳೆ ತನ್ನನ್ನು ʼಸನಾತನ ವಿರೋಧಿʼ ಎಂದು ಆರೋಪಿಸಿ ವಾಕ್ಸಮರ ನಡೆಸಿದ ಬಲಪಂಥೀಯ ಕಾರ್ಯಕರ್ತರ ಮುಂದೆ ಮಧ್ಯಪ್ರದೇಶದ ಗ್ವಾಲಿಯರ್‌ನ ಪೊಲೀಸ್ ವರಿಷ್ಠಾಧಿಕಾರಿ ಹಿನಾ ಖಾನ್ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು indiatoday.in ವರದಿ ಮಾಡಿದೆ.

ಈ ಕುರಿತ ವೀಡಿಯೋ ವೈರಲ್ ಆಗಿದೆ. ಅಂಬೇಡ್ಕರ್ ಪ್ರತಿಮೆಗೆ ಸಂಬಂಧಿಸಿದ ವಿವಾದದ ಬಳಿಕ ಗ್ವಾಲಿಯರ್‌ನಲ್ಲಿ ಉದ್ವಿಗ್ನ ವಾತಾವರಣವಿತ್ತು. ಇದರಿಂದಾಗಿ ಎಸ್‌ಡಿಎಂ ನಗರದಾದ್ಯಂತ ಸೆಕ್ಷನ್ 144 ಅನ್ನು ವಿಧಿಸಿದ್ದರು. ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು, 4,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಈ ಮಧ್ಯೆ ಮಧ್ಯಪ್ರದೇಶ ಹೈಕೋರ್ಟ್ ಹಿರಿಯ ವಕೀಲ ಅನಿಲ್ ಮಿಶ್ರಾ ನೇತೃತ್ವದ ಗುಂಪು ಸ್ಥಳೀಯ ಸಿದ್ಧೇಶ್ವರ ದೇವಸ್ಥಾನದಲ್ಲಿ ಸುಂದರ್ ಕಾಂಡವನ್ನು ಪಠಿಸಲು ಮುಂದಾಗಿದ್ದಾರೆ. ನಿಷೇಧಾಜ್ಞೆಯ ಹಿನ್ನೆಲೆ ಅವರನ್ನು ಹಿನಾ ಖಾನ್ ನೇತೃತ್ವದ ಪೊಲೀಸರು ತಡೆದಿದ್ದಾರೆ.

ಇದರಿಂದ ಹಿನಾ ಖಾನ್ ಮತ್ತು ಅನಿಲ್ ಮಿಶ್ರಾ ನಡುವೆ ವಾಕ್ಸಮರ ನಡೆಯಿತು. ಮಿಶ್ರಾ ಮತ್ತು ಅವರ ಬೆಂಬಲಿಗರು ಹಿನಾ ಖಾನ್ ಅವರನ್ನು ಸನಾತನ ಧರ್ಮದ ವಿರೋಧಿ ಎಂದು ಆರೋಪಿಸಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಈ ವೇಳೆ ಖಾನ್ ಅವರೂ "ಜೈ ಶ್ರೀ ರಾಮ್" ಎಂದು ಘೋಷಣೆ ಕೂಗಿದ್ದಾರೆ. ಇದರಿಂದ ಉದ್ರಿಕ್ತ ಗುಂಪು ದಿಗ್ಬ್ರಮೆಗೊಂಡಿದ್ದಲ್ಲದೆ ಸ್ಥಳದಿಂದ ವಾಪಾಸ್ಸಾಗಿದೆ.

ಎಸ್‌ಪಿ ಖಾನ್ ಈ ನಿರ್ಧಾರವು ಸೆಕ್ಷನ್ 144ರ ಅಡಿಯಲ್ಲಿ ಎಸ್ಡಿಎಂ ಅವರು ಹೊರಡಿಸಿದ ಆದೇಶವಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಆದರೆ ಮಿಶ್ರಾ ಈ ಕ್ರಮವು ಸನಾತನ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಬೆಂಬಲಿಗರ ಜೊತೆ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News