ರಾಜ್ಯಸಭೆಗೆ ನಟ ಕಮಲ್ ಹಾಸನ್ ಸ್ಪರ್ಧೆ : ಮಿತ್ರ ಪಕ್ಷಕ್ಕೆ 1 ಸ್ಥಾನ ಬಿಟ್ಟುಕೊಟ್ಟ ಡಿಎಂಕೆ
Update: 2025-05-28 15:13 IST
Photo | ANI
ಚೆನ್ನೈ: ಜೂನ್ 19ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ 6 ಸ್ಥಾನಗಳ ಪೈಕಿ 4 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಡಿಎಂಕೆ ಬುಧವಾರ ಘೋಷಿಸಿದೆ. ಒಂದು ಸ್ಥಾನವನ್ನು ಮಿತ್ರಪಕ್ಷ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀಧಿ ಮಯ್ಯಂಗೆ ಬಿಟ್ಟುಕೊಟ್ಟಿದೆ. ನಟ ಕಮಲ್ ಹಾಸನ್ ಅವರನ್ನು ಮೇಲ್ಮನೆ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
ಈ ಕುರಿತು ಮಕ್ಕಳ್ ನೀಧಿ ಮೈಯಂ (ಎಂಎನ್ಎಂ) ಮುಖಂಡ ಮುರಳಿ ಅಪ್ಪಾಸ್ ಪ್ರತಿಕ್ರಿಯಿಸಿ, ಕಮಲ್ ಹಾಸನ್ ಅವರು ಮಕ್ಕಳ್ ನೀಧಿ ಮೈಯಂ ಪಕ್ಷದಿಂದ ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯಸಭಾ ಚುನಾವಣೆಗೆ ಆಡಳಿತಾರೂಢ ಡಿಎಂಕೆ ಹಾಲಿ ಸದಸ್ಯ, ಹಿರಿಯ ವಕೀಲ ಪಿ. ವಿಲ್ಸನ್ ಅವರನ್ನು ಮರು ನಾಮನಿರ್ದೇಶನ ಮಾಡಿದೆ. ಇದಲ್ಲದೆ ಇನ್ನೆರಡು ಸ್ಥಾನಗಳಿಗೆ ಎಸ್.ಆರ್.ಶಿವಲಿಂಗಂ ಮತ್ತು ಸಲ್ಮಾ ಅವರನ್ನು ಹೆಸರಿಸಿದೆ.