×
Ad

ʼಸನ್ ಆಫ್ ಸರ್ದಾರ್ʼ ಚಿತ್ರದ ನಟ ಮುಕುಲ್ ದೇವ್ ನಿಧನ

Update: 2025-05-24 12:53 IST

ನಟ ಮುಕುಲ್ ದೇವ್ (Photo credit: indiatoday.in)

ಹೊಸದಿಲ್ಲಿ: ʼಸನ್ ಆಫ್ ಸರ್ದಾರ್ʼ, ʼಜೈ ಹೋʼ ಮುಂತಾದ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ನಟ ಮುಕುಲ್ ದೇವ್ ನಿಧನರಾಗಿದ್ದಾರೆ.

ಮುಕುಲ್ ದೇವ್(54) ನಿಧನದ ಬಗ್ಗೆ ಅವರ ಆಪ್ತರಾದ ವಿಂದು ದಾರಾ ಸಿಂಗ್ ದೃಢಪಡಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಮುಕುಲ್ ದೇವ್ ನಿಧನಕ್ಕೆ ಕಾರಣ ತಿಳಿದು ಬಂದಿಲ್ಲ. ಆದರೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಆಪ್ತ ಮೂಲಗಳು ತಿಳಿಸಿರುವ ಬಗ್ಗೆ ವರದಿಯಾಗಿದೆ.

ಮುಕುಲ್ ಹಿಂದಿ, ಪಂಜಾಬಿ, ಬಂಗಾಳಿ, ಮಲಯಾಳಂ, ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಮತ್ತು ಕೆಲ ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. 'ಯಮ್ಲಾ ಪಗ್ಲಾ ದೀವಾನಾ' (Yamla Pagla Deewana) ಚಿತ್ರದ ಅಭಿನಯಕ್ಕಾಗಿ ಅವರಿಗೆ 7ನೇ ಅಮರೀಶ್ ಪುರಿ ಪ್ರಶಸ್ತಿ ಲಭಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News