×
Ad

AI ಶೃಂಗಸಭೆಯಲ್ಲಿ ಪ್ರತಿಭಟನೆ | ಬಂಧಿತ 9 ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ದಿಲ್ಲಿ ನ್ಯಾಯಾಲಯ ಜಾಮೀನು

ಯುವ ಕಾಂಗ್ರೆಸ್‌ನ ಪ್ರತಿಭಟನೆಯು ರಾಜಕೀಯ ಭಿನ್ನಾಭಿಪ್ರಾಯದ ಅಭಿವ್ಯಕ್ತಿಯಾಗಿದೆ ಎಂದ ನ್ಯಾಯಾಲಯ

Update: 2026-03-02 13:24 IST

ದಿಲ್ಲಿ ನ್ಯಾಯಾಲಯ(https://newdelhi.dcourts.gov.in/)  , ಯುವ ಕಾಂಗ್ರೆಸ್‌ (Indian Youth Congress)


ಹೊಸದಿಲ್ಲಿ: ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಬಂಧಿಸಿದ್ದ 9 ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ದಿಲ್ಲಿ ನ್ಯಾಯಾಲಯ ಜಾಮೀನು ನೀಡಿದೆ.

ಪಟಿಯಾಲ ಹೌಸ್ ನ್ಯಾಯಾಲಯದ ನ್ಯಾಯಾಧೀಶರಾದ ರವಿ ಅವರು, ಕಾಂಗ್ರೆಸ್ ಕಾರ್ಯಕರ್ತರಾದ ಕೃಷ್ಣ ಹರಿ, ನರಸಿಂಹ ಯಾದವ್, ಕುಂದನ್ ಕುಮಾರ್ ಯಾದವ್, ಅಜಯ್ ಕುಮಾರ್ ಸಿಂಗ್, ಜಿತೇಂದ್ರ ಸಿಂಗ್ ಯಾದವ್, ರಾಜ ಗುರ್ಜರ್, ಅಜಯ್ ಕುಮಾರ್ ವಿಮಲ್, ಸೌರಭ್ ಸಿಂಗ್ ಮತ್ತು ಅರ್ಬಾಝ್ ಖಾನ್ ಅವರನ್ನು ಜಾಮೀನಿನ ಮೂಲಕ ಬಿಡುಗಡೆ ಮಾಡಿದ್ದಾರೆ.

ಯುವ ಕಾಂಗ್ರೆಸ್‌ನ ಪ್ರತಿಭಟನೆಯು ರಾಜಕೀಯ ಭಿನ್ನಾಭಿಪ್ರಾಯದ ಅಭಿವ್ಯಕ್ತಿಯಾಗಿದೆ ಹೊರತು ಪುನರಾವರ್ತಿತ ಹಿಂಸಾಚಾರ ಅಥವಾ ಸಂಘಟಿತ ಅಪರಾಧವಲ್ಲ ಎಂದು ಜಾಮೀನು ನೀಡುವ ವೇಳೆ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಫೆಬ್ರವರಿ 20ರಂದು ದಿಲ್ಲಿಯ ಭಾರತ್ ಮಂಟಪದಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾರತ-ಯುಎಸ್ ವ್ಯಾಪಾರ ಒಪ್ಪಂದದಲ್ಲಿ ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News