169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು ಸೇರಿದಂತೆ ಪತನಗೊಂಡ ವಿಮಾನದಲ್ಲಿ 242 ಪ್ರಯಾಣಿಕರಿದ್ದರು : ಅಧಿಕೃತ ಹೇಳಿಕೆ ನೀಡಿದ ಏರ್ ಇಂಡಿಯಾ
Update: 2025-06-12 15:44 IST
Photo | X
ಅಹಮದಾಬಾದ್ : ಗುಜರಾತ್‌ನ ಅಹ್ಮದಾಬಾದ್‌ನಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ಹಾರಾಟ ನಡೆಸುತ್ತಿದ್ದ AI171 ವಿಮಾನ ಟೇಕ್ ಆಫ್ ಆದ ಬೆನ್ನಲ್ಲೇ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ 242 ಪ್ರಯಾಣಿಕರಿದ್ದರು ಎಂದು ಏರ್ ಇಂಡಿಯಾ ದೃಢಪಡಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಏರ್ ಇಂಡಿಯಾ, ಅಹ್ಮದಾಬಾದ್‌ನಿಂದ ಮಧ್ಯಾಹ್ನ 1.38ಕ್ಕೆ ಹೊರಟ ಬೋಯಿಂಗ್ 787-8 ಮಾಡೆಲ್ ವಿಮಾನದಲ್ಲಿ 242 ಪ್ರಯಾಣಿಕರಿದ್ದರು. ಅವರಲ್ಲಿ 169 ಮಂದಿ ಭಾರತೀಯರು, 53 ಮಂದಿ ಬ್ರಿಟಿಷ್, ಓರ್ವ ಕೆನಡಾ ಪ್ರಜೆ ಮತ್ತು 7 ಮಂದಿ ಪೋರ್ಚುಗೀಸ್ ಪ್ರಜೆಗಳಿದ್ದರು ಎಂದು ತಿಳಿಸಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ಕರೆದೊಯ್ಯಲಾಗುತ್ತಿದೆ. ಘಟನೆಯ ಬಗ್ಗೆ ನಡೆಯುವ ತನಿಖೆಗೆ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಏರ್ ಇಂಡಿಯಾ ಹೇಳಿದೆ.
ಹೆಚ್ಚಿನ ಮಾಹಿತಿಗಾಗಿ ಏರ್ ಇಂಡಿಯಾದ 1800 5691 444 ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.