ಕರ್ನೂಲ್ ಬಸ್ ದುರಂತ : ಡಿಎನ್ಎ ಪರೀಕ್ಷೆ ಬಳಿಕ 18 ಜನರ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ
Update: 2025-10-26 18:54 IST
Twitter/jsuryareddy
ಕರ್ನೂಲ್ : ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ ಮೃತಪಟ್ಟ 19 ಜನರ ಪೈಕಿ 18 ಜನರ ಮೃತದೇಹದ ಅವಶೇಷಗಳನ್ನು ಡಿಎನ್ಎ ಪರೀಕ್ಷೆ ಬಳಿಕ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಜಿಲ್ಲಾಧಿಕಾರಿ ಡಾ.ಎ.ಸಿರಿ ಅವರ ಮೇಲ್ವಿಚಾರಣೆಯಲ್ಲಿ ಸರಕಾರಿ ಜನರಲ್ ಆಸ್ಪತ್ರೆಯಲ್ಲಿ (ಜಿಜಿಹೆಚ್) ಡಿಎನ್ಎ ಪರೀಕ್ಷೆ ನಡೆಯಿತು. ಪರೀಕ್ಷೆ ಬಳಿಕ ವೈದ್ಯರು ಮೃತದೇಹದ ಅವಶೇಷಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಆಂಧ್ರಪ್ರದೇಶ ಮತ್ತು ತೆಲಂಗಾಣದ ತಲಾ ಆರು, ಕರ್ನಾಟಕ ಮತ್ತು ತಮಿಳುನಾಡಿನ ತಲಾ ಎರಡು ಮತ್ತು ಒಡಿಶಾ ಮತ್ತು ಬಿಹಾರದ ತಲಾ ಒಂದು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಒಂದು ಮೃತದೇಹದ ಗುರುತು ಪತ್ತೆ ಕಾರ್ಯ ಮುಂದುವರಿದಿದೆ ಎಂದು ತಿಳಿದು ಬಂದಿದೆ.