ಭೂಗತ ಪಾತಕಿ ಅನ್ಮೋಲ್ ಬಿಷ್ಣೋಯಿಯ ಎನ್‌ಐಎ ಕಸ್ಟಡಿ 7 ದಿನ ವಿಸ್ತರಣೆ
Update: 2025-11-29 21:05 IST
ಅನ್ಮೋಲ್ ಬಿಷ್ಣೋಯಿ | Photo Credit : PTI
ಹೊಸದಿಲ್ಲಿ: ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಬಿಷ್ಣೋಯಿಯ ಎನ್‌ಐಎ ಕಸ್ಟಡಿಯನ್ನು ದಿಲ್ಲಿ ನ್ಯಾಯಾಲಯ ಶನಿವಾರ 7 ದಿನಗಳ ಕಾಲ ವಿಸ್ತರಿಸಿದೆ.
ಅತ್ಯಧಿಕ ಭದ್ರತೆ ನಡುವೆ ಎನ್‌ಐಯ ಪ್ರಧಾನ ಕಚೇರಿಯಲ್ಲಿ ವಿಚಾರಣೆ ನಡೆಯಿತು. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪ್ರಶಾಂತ್ ಶರ್ಮಾ ಅವರು ಅನ್ಮೋಲ್ ಬಿಷ್ಣೋಯಿಯ ಕಸ್ಟಡಿ ಅವಧಿಯನ್ನು ಡಿಸೆಂಬರ್ 5ರ ವರೆಗೆ ವಿಸ್ತರಿಸಿ ಆದೇಶಿಸಿದರು.
ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ, ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಹಾಗೂ ಇತರ ಅಪರಾಧ ಪ್ರಕರಣಗಳಲ್ಲಿ ಅನ್ಮೋಲ್ ಬಿಷ್ಣೋಯಿ ಬೇಕಾದವನಾಗಿದ್ದ.
2022ರಿಂದ ತಲೆಮರೆಸಿಕೊಂಡಿದ್ದ ಅನ್ಮೋಲ್‌ನನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಅಮೆರಿಕದಲ್ಲಿ ಬಂಧಿಸಲಾಗಿತ್ತು. ಕಳೆದ ನವೆಂಬರ್ 18ರಂದು ಆತನನ್ನು ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.