×
Ad

ಎಂಬಿಬಿಎಸ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಬನಾರಸ್ ಹಿಂದು ವಿವಿಯ ಹಳೆ ವಿದ್ಯಾರ್ಥಿಗಳ ಸೆರೆ

Update: 2025-08-12 20:38 IST

 ಸಾಂದರ್ಭಿಕ ಚಿತ್ರ 

ವಾರಣಾಸಿ,ಆ.12: ಮಂಗಳವಾರ ಬೆಳಗಿನ ಜಾವ ಬನಾರಸ್ ಹಿಂದು ವಿವಿ(ಬಿಎಚ್‌ಯು)ಯ ಕ್ಯಾಂಪಸ್‌ ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವಿವಿಯ ಮೂವರು ಮಾಜಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ನಸುಕಿನ 3:30ರ ಸುಮಾರಿಗೆ ವಿದ್ಯಾರ್ಥಿನಿ ತನ್ನ ಸ್ನೇಹಿತೆಯರೊಂದಿಗೆ ಗ್ರಂಥಾಲಯದಿಂದ ಹಾಸ್ಟೆಲ್‌ ಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿಸಿದ ಡಿಸಿಪಿ ಗೌರವ ಬನ್ಸ್ವಾಲ್ ಅವರು, ಬೈಕ್‌ ನಲ್ಲಿದ್ದ ಮೂವರು ಯುವಕರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು,ಆಕೆಯ ಮೇಲೆ ಹಲ್ಲೆಗೂ ಪ್ರಯತ್ನಿಸಿದ್ದರು. ಆಕೆಯ ಸ್ನೇಹಿತೆಯ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಎಲ್ಲ ಮೂವರು ಆರೋಪಿಗಳು ಬಿಎಚ್‌ಯುದ ಹಳೆ ವಿದ್ಯಾರ್ಥಿಗಳಾಗಿದ್ದು, ಅವರನ್ನು ಬಂಧಿಸಲಾಗಿದೆ. ಈ ಬಗ್ಗೆ ತನಿಖೆಯು ಪ್ರಗತಿಯಲ್ಲಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News