×
Ad

ಭಾರತ ರತ್ನ ನನಗೆ ಮಾತ್ರವಲ್ಲ, ನಾನು ಪಾಲಿಸಿದ ಆದರ್ಶ ತತ್ತ್ವಗಳಿಗೂ ಗೌರವ : ಅಡ್ವಾಣಿ

Update: 2024-02-03 21:36 IST

ಎಲ್.ಕೆ.ಅಡ್ವಾಣಿ | Photo: PTI 

ಹೊಸದಿಲ್ಲಿ : “ಭಾರತ ರತ್ನ ಪ್ರಶಸ್ತಿಯು ಓರ್ವ ವ್ಯಕ್ತಿಯಾಗಿ ನನಗೆ ಮಾತ್ರವಲ್ಲ, ಜೀವನದುದ್ದಕ್ಕೂ ನಾನು ಪಾಲಿಸಲು ಶ್ರಮಿಸಿದ್ದ ಆದರ್ಶಗಳು ಮತ್ತು ತತ್ತ್ವಗಳಿಗೂ ಸಂದಿರುವ ಗೌರವವಾಗಿದೆ” ಎಂದು ಹಿರಿಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿಯವರು ಶನಿವಾರ ಇಲ್ಲಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ತನಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿದ ಬೆನ್ನಿಗೇ ಆಡ್ವಾಣಿ ಹೇಳಿಕೆಯೊಂದರಲ್ಲಿ, “ಅತ್ಯಂತ ವಿನಮ್ರತೆ ಮತ್ತು ಕೃತಜ್ಞತೆಯೊಂದಿಗೆ ಪ್ರಶಸ್ತಿಯನ್ನು ನಾನು ಸ್ವೀಕರಿಸುತ್ತೇನೆ” ಎಂದು ತಿಳಿಸಿದರು.

‘‘14ರ ಹರೆಯದಲ್ಲಿ ಸ್ವಯಂಸೇವಕನಾಗಿ ಆರೆಸ್ಸೆಸ್ ಗೆ ಸೇರಿದಾಗಿನಿಂದ ನನಗೆ ನಿಯೋಜಿಸಲಾದ ಯಾವುದೇ ಕೆಲಸದಲ್ಲಿಯೂ ನನ್ನ ಪ್ರೀತಿಯ ದೇಶಕ್ಕೆ ಸಮರ್ಪಿತ ಮತ್ತು ನಿಸ್ವಾರ್ಥ ಸೇವೆಯಲ್ಲಿ ಮಾತ್ರ ನಾನು ಪ್ರತಿಫಲವನ್ನು ಅರಸುತ್ತಿದ್ದೆ. ಈ ಜೀವನ ನನ್ನದಲ್ಲ. ನನ್ನ ಜೀವನವು ದೇಶಕ್ಕಾಗಿ ಎಂಬ ಧ್ಯೇಯವಾಕ್ಯವು ನನಗೆ ಜೀವನದಲ್ಲಿ ಪ್ರೇರಣೆಯಾಗಿತ್ತು” ಎಂದು ಅಡ್ವಾಣಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News