ಬಂಗಾರದ ಭಾರೀ ಕುಸಿತಕ್ಕೆ ಕಾರಣವೇನು?; ಇಂದಿನ ದರವೆಷ್ಟು?
ಬೆಳ್ಳಿ ಬೆಲೆಯಲ್ಲೂ ಕುಸಿತ
ಸಾಂದರ್ಭಿಕ ಚಿತ್ರ (AI)
ಚಿನ್ನ-ಬೆಳ್ಳಿಯ ಹಠಾತ್ ಕುಸಿತಕ್ಕೆ ಮುಖ್ಯ ಕಾರಣ ಲಾಭ ಗಳಿಕೆಯ ಉದ್ದೇಶದಿಂದ ಮಾರಾಟ ಮಾಡುತ್ತಿರುವುದು, ಅಮೆರಿಕದ ಡಾಲರ್ ಮೌಲ್ಯದಲ್ಲಿ ಜಿಗಿತ ಮತ್ತು ಷೇರು ಮಾರುಕಟ್ಟೆಗಳಲ್ಲಿ ಮಾರಾಟದಂತಹ ಬಹು ಅಂಶಗಳು ಕಾರಣವಾಗಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತದ ಪರಿಣಾಮ ಭಾರತದ ಮೇಲೂ ಆಗಿದೆ. ಇಂದು ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ 4ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಪರಿಣಾಮವಾಗಿ ಹನ್ನೊಂದು ಗಂಟೆಯ ವೇಳೆಗೆ ಭಾರತದ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 17,062 (- 823) ರೂ.ಗೆ ಕುಸಿದಿದೆ. 22 ಕ್ಯಾರೆಟ್ ಚಿನ್ನದ ಬೆಲೆ 15,640 (- 755) ರೂ. ಮತ್ತು 18 ಕ್ಯಾರೆಟ್ ಚಿನ್ನದ ಬೆಲೆ 12,797 (- 617) ರಷ್ಟು ಕುಸಿತ ಕಂಡಿದೆ.
ಲಾಭಗಳಿಕೆಯ ಉದ್ದೇಶದಿಂದ ಮಾರಾಟ
ತಜ್ಞರ ಪ್ರಕಾರ ಚಿನ್ನ-ಬೆಳ್ಳಿಯ ಹಠಾತ್ ಕುಸಿತಕ್ಕೆ ಮುಖ್ಯ ಕಾರಣ ಲಾಭ ಗಳಿಕೆಯ ಉದ್ದೇಶದಿಂದ ಮಾರಾಟ ಮಾಡುತ್ತಿರುವುದು, ಅಮೆರಿಕದ ಡಾಲರ್ ಮೌಲ್ಯದಲ್ಲಿ ಜಿಗಿತ ಮತ್ತು ಷೇರು ಮಾರುಕಟ್ಟೆಗಳಲ್ಲಿ ಮಾರಾಟದಂತಹ ಬಹು ಅಂಶಗಳು ಕಾರಣವಾಗಿವೆ. ಈ ವ್ಯತ್ಯಾಸ ಇತರ ಸ್ವತ್ತುಗಳಿಗೂ ವಿಸ್ತರಿಸಿದೆ.
ಜನವರಿ ತಿಂಗಳಲ್ಲಿ ಚಿನ್ನ ಸರಿಸುಮಾರು ಶೇ 25ರಷ್ಟು ಏರಿಕೆ ಕಂಡಿದ್ದು, ಬೆಳ್ಳಿ ಶೇ 60ರಷ್ಟು ಬೆಲೆಯೇರಿಕೆಯಲ್ಲಿ ವ್ಯವಹಾರ ನಡೆಸುತ್ತಿದೆ. ಇದಕ್ಕೆ ಮೊದಲು 2025ರಲ್ಲಿ ಚಿನ್ನ ಶೇ 65ರಷ್ಟು ಮತ್ತು ಬೆಳ್ಳಿ ಶೇ 148ರಷ್ಟು ಬೆಲೆಯಲ್ಲಿ ಏರಿಕೆ ಕಂಡಿತ್ತು. ಹೀಗಾಗಿ ಸಹಜವಾಗಿ ಹೂಡಿಕೆದಾರರು ಬೆಲೆ ತನ್ನ ಅತ್ಯುನ್ನತ ಸ್ಥಾನಕ್ಕೆ ವಿಸ್ತರಿಸಲ್ಪಟ್ಟಿದೆ ಮತ್ತು ಇನ್ನು ಏರುವ ಸಾಧ್ಯತೆಯಿಲ್ಲ ಎನ್ನುವ ಭಾವನೆಯಿಂದ ಮಾರಾಟಕ್ಕೆ ಇಳಿದಿದ್ದಾರೆ. ಹೂಡಿಕೆದಾರರು ಬೆಲೆಯ ಉನ್ನತ ಮಟ್ಟದಲ್ಲಿ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
“ಮಾರುಕಟ್ಟೆಯಲ್ಲಿನ ಪೊಳ್ಳುತನ (ಹೂಡಿಕೆದಾರರ ಉತ್ಸಾಹ, ಊಹಾಪೋಹ ಮತ್ತು ಅತಿ ಆಶಾವಾದ ಚಾಲಿತ ಆಸ್ತಿ ಮೌಲ್ಯಗಳು ವೇಗವಾಗಿ ಏರಿ ತಮ್ಮ ಮೂಲಭೂತ, ಆಂತರಿಕ ಮೌಲ್ಯಗಳಿಂದ ಬೇರ್ಪಡುವ ಪೂರ್ವ-ಗುಳ್ಳೆಗಳ ಸ್ಥಿತಿ) ಮತ್ತು ಮೂಲಭೂತ ಮೌಲ್ಯಗಳ ಮೇಲೆ ಪ್ರಭಾವ ಬೀರಿರುವುದು (ಮೂಲ ಮೌಲ್ಯದ ಮೇಲೆ ಖರೀದಿ-ಮಾರಾಟದ ಪ್ರಭಾವ) ನೋಡಿದಲ್ಲಿ ಲೋಹಗಳ ಮೌಲ್ಯ ಬೇಗನೇ ಪೂರ್ವಸ್ಥಿತಿಗೆ ಮರಳಲಿದೆ” ಎಂದು ಹಣಕಾಸು ತಜ್ಞರು ಭಿಪ್ರಾಯಪಟ್ಟಿದ್ದಾರೆ.
ಡಾಲರ್ ಮೌಲ್ಯದ ಏರಿಕೆ ಕಾರಣ
ಈ ನಡುವೆ ಅಮೆರಿಕದ ಡಾಲರ್ ಶೇ 0.3ರಷ್ಟು ಏರಿಕೆ ಕಂಡಿದೆ. ಡಾಲರ್ ಮೌಲ್ಯ ಬಲವಾಗಿದ್ದಾಗ ಸಾಮಾನ್ಯವಾಗಿ ವಿದೇಶೀ ಹೂಡಿಕೆದಾರರು ಡಾಲರ್ ಬೆಲೆಯ ಸರಕುಗಳತ್ತ ಆಕರ್ಷಿತರಾಗುತ್ತಾರೆ. ಹೀಗಾಗಿ ಲೋಹಗಳ ಮೇಲಿನ ಬೇಡಿಕೆ ಕಡಿಮೆಯಾಗುತ್ತದೆ. ಅಮೆರಿಕದ ಮಾರುಕಟ್ಟೆ ಕುಸಿದದಲ್ಲಿ ಇತರ ಆಸ್ತಿಗಳಾದ ಚಿನ್ನ, ಬೆಳ್ಳಿ, ಕೈಗಾರಿಕಾ ಲೋಹಗಳು ಮತ್ತು ಬಿಟ್ ಕಾಯ್ನ್ಗಳ ಮಾರಾಟಕ್ಕೆ ಕಾರಣವಾಗುತ್ತದೆ. ಷೇರು ಮಾರುಕಟ್ಟೆಗಾಗಿ ಅಮೂಲ್ಯ ಮತ್ತು ಕೈಗಾರಿಕಾ ಲೋಹಗಳು ಸೇರಿದಂತೆ ಇತರ ಸ್ವತ್ತುಗಳ ಲಿಕ್ವಿಡೇಟ್ (ತೀರಿಸಿಬಿಡುವುದು) ಮಾಡುವುದೂ ಕಾರಣವಾಗಿದೆ ಎಂದು ಬ್ಲೂ ಲೈನ್ ಫ್ಯೂಚರ್ಸ್ನ ಮುಖ್ಯ ಮಾರುಕಟ್ಟೆ ತಂತ್ರಜ್ಞ ಫಿಲ್ ಸ್ಟ್ರೈಬಲ್ ಹೇಳಿರುವುದಾಗಿ ಬ್ಲೂಮ್ಬರ್ಗ್ಗೆ ತಿಳಿಸಿದರು. “ನಾವು ಆಧಾರರಹಿತ ಕಲ್ಪನೆಯ ಉತ್ತುಂಗವನ್ನು ತಲುಪಿರುವ ರೀತಿ ಕಾಣಿಸುತ್ತಿದೆ” ಎಂದು ಅವರು ಹೇಳಿದ್ದಾರೆ. ಷೇರು ವ್ಯವಹಾರದಲ್ಲಿ ಹೆಚ್ಚು ತಿದ್ದುಪಡಿ ಇದ್ದಾಗ ಹೂಡಿಕೆದಾರರು ಅಮೂಲ್ಯ ಲೋಹಗಳನ್ನು ಲಿಕ್ವಿಡೇಟ್ ಮಾಡಿ ಷೇರು ವಹಿವಾಟಿಗೆ ಹಿಂತಿರುಗುತ್ತಾರೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭೌಗೋಳಿಕ ರಾಜಕೀಯ ಉದ್ವಿಗ್ಘತೆ, ಸುಂಕ ಯುದ್ಧದ ಭಯ ಮತ್ತು ಫೆಡರಲ್ ರಿಸರ್ವ್ನ ಸ್ವತಂತ್ರದ ಕುರಿತಂತೆ ಚಿಂತೆಗಳ ಮಧ್ಯೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರಿಕೆ ಕಂಡಿದ್ದವು. ಆದರೆ ಹೂಡಿಕೆದಾರರು ಚಿನ್ನವನ್ನು ಹೆಚ್ಚು ಬೆನ್ನಟ್ಟಬಾರದು ಎಂದು ವೈಟ್ಓಕ್ ಕ್ಯಾಪಿಟಲ್ ಮ್ಯೂಚುವಲ್ ಫಂಡ್ ಅಭಿಪ್ರಾಯಪಟ್ಟಿರುವುದಾಗಿ ವರದಿಯಾಗಿದೆ.
ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?
ಶುಕ್ರವಾರ ಜನವರಿ 30ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ದಿಢೀರ್ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 17,062 (- 823) ರೂ. ಗೆ ಕುಸಿದಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 15,640 (- 755) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,797 (- 617) ರೂ. ಬೆಲೆಗೆ ತಲುಪಿದೆ.
ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 17,062 ರೂ., 22 ಕ್ಯಾರೆಟ್ ಚಿನ್ನಕ್ಕೆ 15,640 ರೂ. ಮತ್ತು 18 ಕ್ಯಾರೆಟ್ ಚಿನ್ನಕ್ಕೆ (999 ಚಿನ್ನ ಎಂದೂ ಕರೆಯುತ್ತಾರೆ) ಪ್ರತಿ ಗ್ರಾಂಗೆ 12,797 ರೂ. ಆಗಿದೆ. ಇಂದು ಶುಕ್ರವಾರ 1 ಗ್ರಾಂ ಇಂದಿನ ಚಿನ್ನದ ದರ 17,062 ರೂ. ಇದ್ದು, ಗುರುವಾರ 17,885 ರೂ. ಇತ್ತು. ಈ ಮೂಲಕ 823 ರೂ. ಇಳಿಕೆ ಆದಂತೆ ಆಗಿದೆ. 1 ಗ್ರಾಂ ಆಭರಣ ಚಿನ್ನ ಇಂದು 15,640 ರೂ. ಇದ್ದು, ಗುರುವಾರ 16,395 ರೂ. ಇತ್ತು. ಈ ಮೂಲಕ 755 ರೂ.ಕಡಿಮೆ ಆಗಿದೆ.
ಬೆಳ್ಳಿ ಬೆಲೆಯಲ್ಲೂ ಕುಸಿತ
ಬೆಂಗಳೂರಲ್ಲಿ ಬೆಳ್ಳಿ ಬೆಲೆ ಸಹ ಕಡಿಮೆ ಆಗಿದೆ. 1 ಗ್ರಾಂ ಬೆಳ್ಳಿ ಬೆಲೆ ಇಂದು 395 ರೂ. ಇದ್ದು, ನಿನ್ನೆ 410 ರೂ.ಇತ್ತು. ಹಾಗೆಯೇ 100 ಇಂದಿನ ಬೆಳ್ಳಿ ಬೆಲೆ 39,500 ಇದ್ದು, ನಿನ್ನೆ 41,000 ರೂ. ಇತ್ತು. ಈ ಮೂಲಕ 1,500 ರೂ. ಕಡಿಮೆ ಆದಂತೆ ಆಗಿದೆ.
ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ ಹೇಗಿದೆ?
ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ದರ 17,077 (- 823) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 15,655 (- 755) ರೂ. ಇದೆ.
ಮುಂಬೈ 24 ಕ್ಯಾರೆಟ್ ಚಿನ್ನದ ದರ 17,062 (- 823) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 15,640 (- 755) ರೂ. ಇದೆ.
ಅಹಮದಾಬಾದ್ 24 ಕ್ಯಾರೆಟ್ ಚಿನ್ನದ ದರ 17,067 (- 823) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 15,645 (- 755) ರೂ. ಇದೆ.
ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನದ ದರ 17,673 (- 655) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 16,200 (- 600) ರೂ. ಇದೆ.
ಕೋಲ್ಕತ್ತಾದಲ್ಲಿ 24 ಕ್ಯಾರೆಟ್ ಚಿನ್ನದ ದರ 17,062 (- 823) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 15,640 (- 755) ರೂ. ಇದೆ.
ಹೈದರಾಬಾದ್ ನಲ್ಲಿ 24 ಕ್ಯಾರೆಟ್ ಚಿನ್ನದ ದರ 17,062 (- 823) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 15,640 (- 755) ರೂ. ಇದೆ.
ಜೈಪುರದಲ್ಲಿ 24 ಕ್ಯಾರೆಟ್ ಚಿನ್ನದ ದರ 17,077 (- 823) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 15,655 (- 755) ರೂ. ಇದೆ.
ಭೋಪಾಲ್ ನಲ್ಲಿ 24 ಕ್ಯಾರೆಟ್ ಚಿನ್ನದ ದರ 17,067 (- 823) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 15,645 –( 755) ರೂ. ಇದೆ.
ಲಖನೌಲ್ಲಿ 24 ಕ್ಯಾರೆಟ್ ಚಿನ್ನದ ದರ 17,077 (-823) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 15,655 (- 755) ರೂ. ಇದೆ.
ಚಂಡೀಗಢದಲ್ಲಿ 24 ಕ್ಯಾರೆಟ್ ಚಿನ್ನದ ದರ 17,077 (-823) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 15,655 (- 755) ರೂ. ಇದೆ.