ಬಾಂಗ್ಲಾದೇಶದಲ್ಲಿ ಬಂಧನದಲ್ಲಿದ್ದ 23 ಮೀನುಗಾರರು ಭಾರತಕ್ಕೆ ವಾಪಾಸ್
Update: 2026-01-30 10:46 IST
Photo| NDTV
ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಬಂಧನದಲ್ಲಿದ್ದ 23 ಮೀನುಗಾರರು ಗುರುವಾರ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತ 128 ಬಾಂಗ್ಲಾದೇಶಿ ಮೀನುಗಾರರನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ಅಂತರರಾಷ್ಟ್ರೀಯ ಸಾಗರ ಗಡಿ ರೇಖೆಯನ್ನು ದಾಟಿದ ಭಾರತೀಯ ಮೀನುಗಾರರನ್ನು ಬಾಂಗ್ಲಾದೇಶದ ಅಧಿಕಾರಿಗಳು ಬಂಧಿಸಿದ್ದರು. ಬಾಂಗ್ಲಾದೇಶದ ಮೀನುಗಾರರನ್ನು ಸಹ ಭಾರತೀಯ ಅಧಿಕಾರಿಗಳು ಇದೇ ರೀತಿ ಬಂಧಿಸಿದ್ದರು.
"23 ಭಾರತೀಯ ಮೀನುಗಾರರು ಮತ್ತು 128 ಬಾಂಗ್ಲಾದೇಶಿ ಮೀನುಗಾರರನ್ನು ಬಿಡುಗಡೆ ಮಾಡಿ ಸ್ವದೇಶಕ್ಕೆ ಕಳುಹಿಸುವ ಪ್ರಕ್ರಿಯೆಯನ್ನು ಎರಡೂ ಸರಕಾರಗಳು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಭಾರತ ಸರಕಾರವು ಭಾರತೀಯ ಮೀನುಗಾರರ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.