ಬಿಹಾರ ಚುನಾವಣೆ | ಉವೈಸಿ ಪಕ್ಷಕ್ಕೆ ಐದು ಸ್ಥಾನ!
ಪ್ರತ್ಯೇಕವಾಗಿ ಸ್ಪರ್ಧಿಸಿ ಗೆದ್ದ ಎಐಎಂಐಎಂ
Update: 2025-11-14 22:11 IST
ಅಸಾದುದ್ದೀನ್ ಉವೈಸಿ | Photo Credit : PTI
ಪಾಟ್ನಾ: ಬಿಹಾರ ವಿಧಾನಸಬಾ ಚುನಾವಣೆಯಲ್ಲಿ ಅಸಾದುದ್ದೀನ್ ಉವೈಸಿ ನೇತೃತ್ವದ ಅಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಬಮುಸ್ಲಿಮೀನ್ (ಎಐಎಂಐಎಂ) ಪಕ್ಷವು ಐದು ಸ್ಥಾನಗಳಲ್ಲಿ ಜಯಗಳಿಸಿದ್ದು, ತನ್ನ ಹಿಂದಿನ ಸಾಧನೆಯನ್ನು ಪುನರಾವರ್ತಿಸಿದೆ. ಜೊಕಿಹಾಟ್, ಬಹಾದೂರ್‌ಗಾಂ, ಕೊಚಾದಾಮನ್, ಆಮೌರ್,ಬೈಸಿ ಕ್ಷೇತ್ರಗಳಲ್ಲಿ ಜಯಗಳಿಸಿದೆ.
ಎಐಎಂಐಎಂ ಪಕ್ಷವು ಒಟ್ಟು 25 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಒಟ್ಟು ಶೇ.1.9ರಷ್ಟು ಮತಗಳನ್ನು ಗಳಿಸುವಲ್ಲಿ ಸಫಲವಾಗಿದೆ. 2020ರ ವಿಧಾನಸಭಾ ಚುನಾವಣೆಯಲ್ಲೂ ಎಐಎಂಐಎಂ ಪಕ್ಷವು ಈ ಐದು ಕ್ಷೇತ್ರಗಳಲ್ಲಿ ಜಯಗಳಿಸಿತ್ತು.
ಮಹಾಘಟಬಂಧನ್ ಮೈತ್ರಿಕೂಟದ ಜೊತೆ ಸೀಟು ಹಂಚಿಕೆ ಮಾತುಕತೆ ವಿಫಲಗೊಂಡ ಬಳಿಕ ಎಐಎಂಐಎಂ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿತ್ತು.