×
Ad

ಪ್ರಧಾನಿ ಹುದ್ದೆಯನ್ನೆ ಕೇಳುತ್ತಿರುವ ಬಿಜೆಪಿ ಅಭ್ಯರ್ಥಿ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

Update: 2026-02-13 20:27 IST

ಮಣಿಕಂಠ ರಾಠೋಡ್ / ಪ್ರಿಯಾಂಕ್ ಖರ್ಗೆ 

ಬೆಂಗಳೂರು, ಫೆ. 13: ವಿಧಾನಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಈಗ ಪ್ರಧಾನಿ ಮೋದಿ ಹುದ್ದೆಯನ್ನೇ ಕೇಳುತ್ತಿದ್ದಾರೆ. ಮೋದಿಯವರ ಕುರ್ಚಿಗೆ ಕಣ್ಣು ಹಾಕಿರುವ ಈ ವ್ಯಕ್ತಿಯ ಪರವಹಿಸಿ ಬಿಜೆಪಿಯ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಇಡೀ ಬಿಜೆಪಿ ತಂಡ ಕಲಬುರಗಿಯಲ್ಲಿ ‘ಸದಾರಮೆ ನಾಟಕ’ ಪ್ರದರ್ಶಿಸಿದ್ದರು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಶುಕ್ರವಾರ ಈ ಸಂಬಂಧ ಎಕ್ಸ್ ನಲ್ಲಿ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಅವರು, ಅದೇ ವ್ಯಕ್ತಿ ಈಗ ಹಲವು ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿದ್ದಾನೆ, ಇದಕ್ಕೆ ರಾಜ್ಯ ಬಿಜೆಪಿ ನಾಯಕರು ಉತ್ತರ ಹೇಳಲೇಬೇಕಾಗಿದೆ. ಶೋಷಿತ ಸಮುದಾಯಗಳ ಮೀಸಲಾತಿ ರದ್ದುಗೊಳಿಸಬೇಕು, ಸಮುದಾಯ ಆಧಾರಿತ ಮೀಸಲಾತಿ ಕೇಳುವವರನ್ನು ಜೈಲಿಗಟ್ಟಬೇಕು ಎಂಬ ಮಾತುಗಳನ್ನು ಆಡಿದ್ದಾನೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಬಿಜೆಪಿಯವರು ಮೌನವಹಿಸಿರುವುದೇಕೆ? ಇದು ಬಿಜೆಪಿಯ ಒಳಮನಸಿನ ಮಾತುಗಳೇ? ಈ ಮಾತುಗಳನ್ನು ಬಿಜೆಪಿ ಅನುಮೋದಿಸುತ್ತದೆಯೇ? ಈ ವ್ಯಕ್ತಿಯ ಪರವಹಿಸಿ, ದಂಡೆತ್ತಿ ಬಂದು ‘ದಂಡ'ಯಾತ್ರೆ ಮಾಡಿದ್ದ ಆರ್.ಅಶೋಕ್, ವಿಯೇಂದ್ರ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರೇ, ಈತನ ಮಾತುಗಳಿಗೆ ನಿಮ್ಮ ಉತ್ತರವೇನು? ಈತನ ಅಭಿಪ್ರಾಯ ನಿಮ್ಮ ಅಭಿಪ್ರಾಯವೂ ಆಗಿದೆಯೇ? ಎಂದು ಪ್ರಶ್ನಿಸಿರುವ ಪ್ರಿಯಾಂಕ್ ಖರ್ಗೆ, ಆರೆಸ್ಸೆಸ್ ಚಿಂತನಾ ಕ್ರಮಗಳಿಂದಲೆ ಇಂತಹ ಮೂರ್ಖತನಗಳು ಸೃಷ್ಟಿಯಾಗುತ್ತಿವೆ ಎಂದು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News